ಅಪರಾಧ ತಡೆಗೆ ಯುವಕರ ಪಾತ್ರ ದೊಡ್ಡದು ಕಾಂಬ್ಳೆ

ಸಿಂಧನೂರು.ಜು.೨೨- ಜನರ ನೆಮ್ಮದಿಗೆ ಭಂಗ ತರುವ ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಯಲು ಪೊಲೀಸರ ಜೊತೆ ಯುವಕರು ಕೈ ಜೋಡಿಸಿದಾಗ ಮಾತ್ರ ಸಮಾಜದಲ್ಲಿ ನಾವೆಲ್ಲರೂ ಶಾಂತಿ ಸಾಮರಸ್ಯದಿಂದ ಬದುಕಲು ಸಾದ್ಯ ಎಂದು ಸಿಪಿಐ ಉಮೇಶ ಕಾಬ್ಳೆ ಯುವಕರಿಗೆ ಕಿವಿ ಮಾತು ಹೇಳಿದರು.
ನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಚಟುವಟಿಕೆ ಮಾಡುವ ಯುವಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದ ಅವರು ಅಪರಾಧ ಚಟುವಟಿಕೆ ತಡೆಯಲು ಕೇವಲ ಪೊಲೀಸ್ ಇಲಾಖೆ ಯಿಂದ ಸಾಧ್ಯವಿಲ್ಲ. ಪೊಲೀಸರ ಜೊತೆಗೆ ಯುವಕರು ಕೈ ಜೋಡಿಸಿದಾಗ ಮಾತ್ರ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣ ಸಾದ್ಯ ಹಾಗಾಗಿ ಯುವಕರು ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಬೇಕು ಎಂದು ಯುವಕರಲ್ಲಿ ಮನವಿ ಮಾಡಿಕೊಂಡರು.
ಶಾಲಾ ವಾಹನ ಚಾಲಕರು,ಆಟೋ ಚಾಲಕರು,ಸಾರಿಗೆ ಇಲಾಖೆ,ಆಂಬುಲೆನ್ಸ್ ಬಗ್ಗೆ ವಾಹನಗಳ ಇನ್ಸುರೆನ್ಸ್ ಸೇರಿದಂತೆ ಈ ವರ್ಷ ಸುಮಾರು ೧೮ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಮಾಡಿ ಸಾರ್ವಜನಿಕ ರಲ್ಲಿ ಅರಿವು ಮುಡಿಸಲಾಗಿದೆ. ನಗರದಲ್ಲಿ ೩ ಲಕ್ಷ ೯೮ ಸಾವಿರ ಜನಸಂಖ್ಯೆಗೆ ೨೦೦ ಜನ ಪೊಲೀಸರು ಪಿಎಸೈ ೫ ಜನ,ಸಿಪಿಐ ೧,ಡಿವೈಎಸ್ಪಿ ೧ ಇಷ್ಟೇ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಜನರ ಪ್ರಾಣ,ಮಾನ,ಹಾನಿ ಕಾಪಾಡುವ ಜೊತೆಗೆ ಶಾಂತಿ ,ಕೋಮುಸೌಹಾರ್ದತೆ ಕದಡದಂತೆ ಪೊಲೀಸರು ನೋಡಿಕೊಳ್ಳಬೇಕಾಗಿದೆ ಎಂದರು.
ಪೊಲೀಸ್ ಇಲಾಖೆಯಿಂದ ನಗರದಲ್ಲಿ ಸಿಸಿಟಿವಿ ಅಳವಡಿಸುವ ಸಲುವಾಗಿ ಅನುಮೋದನೆಗಾಗಿ ಕಳುಹಿಸಲಾಗಿದ್ದು ಮಂಜೂರಾತಿ ದೊರೆತ ನಂತರ ೭೫ ಸ್ಥಳದಲ್ಲಿ ೧೬೮ ಸಿಸಿಟಿವಿಗಳನ್ನು ಅಳವಡಿಸಲಾಗುವುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಮೇಲೆ ಇಲಾಖೆಯಿಂದ ೩೦೦ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಮಾಡುವ ಸಕ್ರಿಯ ಯುವಕರ ಹೆಸರು ಮತ್ತು ಮೊಬೈಲ್ ನಂಬರ್ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಯುವಕರ ಸಾಮಾಜಿಕ ಜಾಲತಾಣಗಳ ಗ್ರೂಪ್ ಮಾಡಲಾಗಿದ್ದು ಎಲ್ಲಿಯಾದರೂ ಅಹಿತಕರ ಘಟನೆ ಹಾಗೂ ಕಳ್ಳತನ ನಡೆದ ಬಗ್ಗೆ ಗ್ರೂಪ್ ನಲ್ಲಿ ಇರುವ ಯುವಕರು ಮಾಹಿತಿ ಹಾಕುವ ಮೂಲಕ ಪೊಲೀಸರಿಗೆ ಸಹಾಯ ಮಾಡಬೇಕು.ಮಾಹಿತಿಯನ್ನು ನಿಡಿದ ಯುವಕರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಪೊಲೀಸ್ ಇಲಾಖೆಯಿಂದ ಈ ವರ್ಷದಲ್ಲಿ ೨೦೦ ವಾಹನಗಳಿಗೆ ಇನ್ಸುರೆನ್ಸ್ ಮಾಡಿಸಲಾಗಿದೆ.ಭಿಕ್ಷಾಟನೆ ಹಾಗೂ ಮರಳಿನ ಸಾಗಾಣಿಕೆ ಬಂಡಿಗಳನ್ನು ಕಡಿವಾಣ ಹಾಕಲಾಗುವುದು.ಅಪರಾಧ ಚಟುವಟಿಕೆ ತಡೆಗಟ್ಟಲು
ಸಾರ್ವಜನಿಕರು ತಮ್ಮ ಅಂಗಡಿ ,ಮನೆಗಳ ಮುಂದೆ ಸಿಸಿಟಿವಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿಪಿಐ ಉಮೇಶ ಕಾಂಬ್ಳೆ ಮನವಿ ಮಾಡಿಕೊಂಡರು.
ಗ್ರಾಮೀಣ ಠಾಣೆಯ ಪಿಎಸೈ ಯರಿಯಪ್ಪ, ಸಂಚಾರಿ ಠಾಣೆಯ ಪಿಎಸೈ ಬಸವರಾಜ,ನಗರ ಸಭೆ ಸದಸ್ಯ ಚಂದ್ರು ಮೈಲಾರ,ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ ಯುವಕರಾದ ಆರ್.ಅಂಬರೂಸ್,ರಾಮಕೃಷ್ಣ ಭಜಂತ್ರಿ, ರಾಜು ಅಡವಿಭಾವಿ, ಗಂಗಣ್ಣ ಡಿಶ್, ರಮೇಶ ಕುನ್ನಟಗಿ,ವೀರೇಶ ಭಾವಿಮನಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಇನ್ನಿತರ ಯುವಕರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.