
ಕೋಲಾರ,ಮಾ,೧೫- ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಭೂಕಂಪ, ರೋಗ ರುಜನುಗಳು, ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ ಎಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಅಭಿಪ್ರಾಯಪಟ್ಟರು.
ಮುಳಬಾಗಿಲಿನ ೧೦ನೇ ನಂಬರ್ ಕಲ್ಯಾಣ ಮಂಟಪದಲ್ಲಿ ಅಲ್ಪಸಂಖ್ಯಾತ ಕಾಂಗ್ರೇಸ್ ಕಾರ್ಯಕರ್ತರ ಸಭೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದರು.
ತಪ್ಪುಮಾಡುವುದು, ಯಾಮಾರಿಸು ವುದು, ಇನ್ನೊಬ್ಬರ ಜೇಬುಗೆ ಕೈಹಾಕುವುದು, ಭ್ರಷ್ಟಾಚಾರ ಮಾಡುವುದು ನನಗೆ ಗೊತ್ತಿಲ್ಲ, ನನ್ನ ಮೇಲೆ ಅಪಪ್ರಚಾರ ಮಾಡುವವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಗುಡುಗಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಬಿಜೆಪಿ ಮುನಿಸ್ವಾಮಿರನ್ನು ಬೆಂಬಲಿಸಿ ಎಂಪಿ. ಮಾಡಿದ್ದೇನೆ ಇದಕ್ಕೆ ಕಾರಣ ನನಗೆ ಮೋಸ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳಲು ಎಂದು ಕೆ.ಹೆಚ್.ಮುನಿಯಪ್ಪ ಹೆಸರು ಹೇಳದೇ ಪರೋಕ್ಷವಾಗಿ ಟೀಕಿಸಿದರು.
ನಾನು ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರನ್ನು ಕೈಬಿಡುವುದಿಲ್ಲ, ಸದಾಕಾಲ ಅವರ ನೆರವಿಗೆ ಇರುತ್ತೇನೆಂದು ಭರವಸೆ ನೀಡಿದರಲ್ಲದೆ ಅಲ್ಪಸಂಖ್ಯಾತರು ಸಹ ನನನ್ನು ಕೈ ಬಿಡಬಾರದೆಂದು ಮನವಿ ಮಾಡಿ ಅಪಪ್ರಚಾರಗಳಿಗೆ ಕಿವಿಕೊಡಬಾರದೆಂದು ಎಂದು ಮನವಿ ಮಾಡಿದರು.
ಎಂ.ಎಲ್‌ಸಿಗಳಾದ ನಸೀರ್ ಅಹಮದ್, ಎಂ.ಎಲ್.ಅನಿಲ್ ಕುಮಾರ್, ಮುಖಂಡ ಸಿದ್ದನಹಳ್ಳಿ ಶೇಖರ್, ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ಟೌನ್ ಬ್ಲಾಕ್ ಅಧ್ಯಕ್ಷ ಅಮಾನುಲ್ಲ, ಮುನಿಆಂಜಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರಗೌಡ, ಗೊಲ್ಲಹಳ್ಳಿ ಜಗದೀಶ್, ಗ್ರಾಮಾಂತರ ಕಾಂಗ್ರೆಸ್ ಮೈನಾರಿಟಿ ಅಧ್ಯಕ್ಷ ಕುರುಡುಮಲೆ ಚೋಟೋಸಾಬ್, ಟೌನ್ ಬ್ಲಾಕ್ ಅಧ್ಯಕ್ಷ ಅಂಜದ್‌ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮದ್ ಸುಹೇಲ್ ಅಹಮದ್, ನೂಗಲಬಂಡೆ ರಹಮತುಲ್ಲಖಾನ್ ಇದ್ದರು.