ಭಾಲ್ಕಿ:ಅ.21:ತಾಲ್ಲೂಕಿನ ಸಿದ್ದಾಪೂರ ವಾಡಿ ಕ್ರಾಸ್ ಬಳಿ ದ್ವಿಚಕ್ರ ವಾಹನ, ಅಪರಿಚಿತ ವಾಹನದ ಮಧ್ಯೆ ಅಪಘಾತ ಸಂಭವಿಸಿ
ಸಂತಪೂರ ಗ್ರಾಮದ ಮಹಾದೇವ ವೈಜಿನಾಥ (25) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಯುವಕನ ಮಾವ ತಮ್ಮಣ್ಣಾ ಚಂದ್ರಪ್ಪಾ (30) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಒಯ್ಯಲಾಗಿದೆ.
ನಿಖರವಾಗಿ ಯಾವ ವಾಹನದ ಜೊತೆ ಅಪಘಾತವಾಗಿದೆ ಎಂಬುದನ್ನು ತಿಳಿಯಲು ಸಿಸಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ ಎಂದು ಪಿಎಸ್‍ಐ ಸುದರ್ಶನ ರೆಡ್ಡಿ ತಿಳಿಸಿದ್ದಾರೆ.
ಈ ಸಂಬಂಧ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.