ಅಪಘಾತ: ಯುವಕ ಸಾವು

ಹಾವೇರಿ,ನ10- ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಬಸಾಪುರ ಗ್ರಾಮದ ಗುತ್ತಲ ರಸ್ತೆಯ ಬಳಿ ನಡೆದಿದೆ.
ಬಸಾಪುರಗ್ರಾಮದ ಆಕಾಶ ಮನ್ನಂಗಿ(28) ಮೃತನಾದ ಯುವಕ. ಈತ ನೆಗಳೂರ ರಸ್ತೆಯಲ್ಲಿದ್ದ ತನ್ನ ಜಮೀನಿನಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಹಾವೇರಿ ಕಡೆಯಿಂದ ಗುತ್ತಲ ಕಡೆಗೆ ಸಂಚರಿಸುತ್ತಿದ್ದ ಕೆ ಎ 42 ಎಫ್ 1070 ಸಾರಿಗೆ ಸಂಸ್ಥೆಯ ಬಸ್ಸಿಗೆ ಬೈಕ ಡಿಕ್ಕಿ ಹೊಡೆದ ಪರಿಣಾಮ ಸಾವು ಸಂಭವಿಸಿದೆ. ಮೃತ ಆಕಾಶ ರಾನೆಬೆನ್ನೂರಿನ ಆರ್,ಟಿ,ಎಸ್, ಕಾನೂನು ವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ಇತ್ತೀಚೆಗೆ ಜರುಗಿದ ಅಂತಿಮ ಸೆಮಿಸ್ಟರ್ ಪರಿಕ್ಷೆಗಳಿಗೆ ಹಾಜರಾಗಿದ್ದ. ವಿಷಯ ತಿಳಿದ ತಕ್ಷಣ ಬಸಾಪುರ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ಜಮಾಯಿಸಿದರು. ಸ್ಥಳಕ್ಕೆ ಸಿ.ಪಿ.ಐ ನಾಗಮ್ಮ ಕೆ ಭೇಟಿ ನೀಡಿ ಪರಶೀಲಿಸಿದರು ಗುತ್ತಲ ಸರಕಾರಿಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರಿಕ್ಷೆಗೆ ಕಳುಹಿಸಲಾಯಿತು.ಗುತ್ತಲ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ಮುಗಿಲ ಮುಟ್ಟಿದ ಸಂಬಂಧಿಕರ ಆಕ್ರಂದನ: ತನ್ನ ಮಗನ ಸಾವಿನ ಸುದ್ದಿ ತಿಳಿದ ತಕ್ಷಣ ತಂದೆ ತಾಯಿ ಹಾಗೂ ಸಹೋದರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.