ಅಪಘಾತ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ನೆರವು ನೀಡಿದ ಶಾಸಕ ನಾಗೇಂದ್ರ


ಬಳ್ಳಾರಿ ನ 21 : : ತಾಲೂಕಿನ ಸಿರವಾರ ಗ್ರಾಮದ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟ ಶಿವರುದ್ರಪ್ಪ (36) ಕುಟುಂಬದ ಸದಸ್ಯರಿಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ನಿನ್ನೆ ಧನ ಸಹಾಯ ಮಾಡಿದರು.
ಗ್ರಾಮಕ್ಕೆ ನಿನ್ನೆ ಭೇಟಿ ನೀಡಿದ ಶಾಸಕರ ಬಳಿ ಶಿವರುದ್ರಪ್ಪ ಕುಟುಂಬಸ್ಥರು ತಮ್ಮ ಸಂಕಟವನ್ನು ವ್ಯಕ್ತಪಡಿಸಿದಾಗ ತಕ್ಷಣ ಶಾಸಕರು 25,000 ನೀಡುವ ಮೂಲಕ ಮಾನವೀಯತೆ ಮೆರೆದರು. ನೆರವು ನೀಡಿದ ಬಳಿಕ ಅಲ್ಲಿಂದ ನೇರವಾಗಿ ಅಪಘಾತ ಸಂಭವಿಸಿದ್ದ ನಾಗರೆಡ್ಡಿ ಗೋದಾಮಿನ ಬಳಿ ತೆರಳಿ ಪರಿಶಿಲನೆ ನಡೆಸಿದರು.
ಸ್ಥಳದಲ್ಲಿದ್ದ ಜನತೆ ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ ಎಂದು ಶಾಸಕರಿಗೆ ತಿಳಿಸಿದರು. ಆಘ ಸಂಬಂಧಿಸಿದ ಅಧಿಕಾರಿಗಳು ಕರೆಸಿದ ಶಾಸಕರು. ಮುಂದೆ ಅಪಘಾತಗಳು ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಂಜಿನಿಯರ್ ಜಯರಾಮರೆಡ್ಡಿಗೆ ಸೂಚಿಸಿದರು.