ಅಪಘಾತ ಮಹಿಳಾ ವೈದ್ಯ ಯುವತಿ ಸಾವು

ಕಲಬುರಗಿ, ಜ. 13: ಕಲಬುರಗಿಯಿಂದ ಮರತೂರ ಹೋಗುವ ಮಾರ್ಗದಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡಿದ ಪರಿಣಾಮವಾಗಿ ಯುವತಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ಪ್ಲೇಸರ್ ಸ್ಕೂಟಿ ಗಾಡಿಯ ಮೇಲೆ ಹೊರಟಿದ್ದ ಎಂಬಿಬಿಎಸ್ ಮುಗಿಸಿ, ಎಂ.ಡಿ. ಓದುತ್ತಿರುವ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಪ್ರೀತಿ ಎಂಬ 21 ವರ್ಷದ ಯುವತಿಯೇ ಸಾವನ್ನಪ್ಪಿದ ನೃತದೃಷ್ಟಿಯಾಗಿದ್ದಾಳೆ.
ಮೃತಪಟ್ಟ ಯುವತಿ ಭಂಕೂರ ನಿವಾಸಿಯಾಗಿದ್ದಾಳೆ.
ಪ್ಲೇಸರ್ ವಹಿಕಲ್ ಮೇಲೆ ಯುವತಿ ಕಲಬುರಗಿಯಿಂದ ಮರತೂರ ಹೋಗುವಾಗ ಮಾರ್ಗ ಮಧ್ಯದಲ್ಲಿರುವ ಧರ್ಮಾಪೂರ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಕಲಬುರಗಿ ಸಂಚಾರಿ ಪೋಲಿಸ್ ಠಾಣೆ-2ರಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.