ಅಪಘಾತ: ಬೈಕ್ ಸವಾರ ಸಾವು

ಬೆಳಗಾವಿ, ನ 4-ಟ್ರ್ಯಾಕ್ಟರವೊಂದು ಬೈಕ್ ಸವಾರನೋರ್ವನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭಿರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಿನ್ನೆ ತಾಲೂಕಿನ ಬೂತರಾಮಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ನಡೆದಿದೆ.
ಮೃತ ಯುವಕ ಹುಕ್ಕೇರಿ ತಾಲೂಕಿನ ಬೆನಕೊಳ್ಳಿ ಗ್ರಾಮದ ಅರ್ಜುನ ಯಲ್ಲಪ್ಪಾ ಗಸ್ತಿ (24). ಅಪಘಾತಕ್ಕೀಡಾದ ಸಂದರ್ಭದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪಿಐ ರಾಘವೇಂದ್ರ ಹಳ್ಳೂರ, ಪಿಎಸ್‍ಐ ಅವಿನಾಶ ಯರಗೊಪ್ಪ, ಆರ್. ಟಿ. ಲಕ್ಕನಗೌಡರ ಅವರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.