ಅಪಘಾತ ಪ್ರಕರಣದಲ್ಲಿ ತಿರುವು

ಮೈಸೂರು:ಮಾ:26: ಇತ್ತೀಚೆಗೆ ಮೈಸೂರು ರಿಂಗ್ ರೋಡ್ ಬಳಿ ಪೆÇಲೀಸರ ತಪಾಸಣೆ ವೇಳೆ ಬೈಕ್ ಅಪಘಾತ ಸಂಭವಿಸಿ ದೇವರಾಜ್ ಎಂಬುವವರು ಮೃತಪಟಿದ್ದು ಆ ಸಾವು ತಿರುವು ಪಡೆಯುತ್ತಿದೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೆÇಲೀಸರು ಬಿಡುಗಡೆ ಮಾಡಿದ್ದ ಗಾಯಾಳುವಿನ ವಿಡಿಯೋ ಹೇಳಿಕೆಗೂ ಇದೀಗ ಮೃತ ದೇವರಾಜು ಅವರ ಪತ್ನಿ ಪೆÇಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಾಗಿರುವ ಹೇಳಿಕೆಗೂ ಸಾಮ್ಯತೆ ಇಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ದಿನಾಂಕ 22 -3-2021 ರಂದು ಮೈಸೂರಿನ ರಿಂಗ್ ರಸ್ತೆಯಲ್ಲಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ದೇವರಾಜು ಮೃತಪಟ್ಟಿದ್ದರು. ಘಟನೆಯಲ್ಲಿ ದೇವರಾಜು ಅವರ ಸ್ನೇಹಿತ ಸುರೇಶ್ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಪೆÇಲೀಸರು ಗಾಯಾಳು ಸುರೇಶ್ ಅವರಿಂದ ಒಂದು ವಿಡಿಯೋ ಸಂದೇಶವನ್ನ ಬಿಡುಗಡೆ ಮಾಡಿದ್ದರು.
ಅದರಲ್ಲಿ ಪೆÇಲೀಸರದ್ದು ಏನು ತಪ್ಪಿಲ್ಲ. ದೇವರಾಜು ಅವರು ಬೈಕ್ ಓಡಿಸುತ್ತಿದ್ದರು. ನಾನು ಹಿಂಬದಿಯಲ್ಲಿ ಕುಳಿತಿದ್ದೆ. ಈ ವೇಳೆಯಲ್ಲಿ ರಿಂಗ್ ರಸ್ತೆ ಬಳಿ ತೆರಳುತ್ತಿದ್ದ ವೇಳೆ ಹಿಂದೆಯಿಂದ ಟ್ರಕ್ ಬಂದು ಗುದ್ದಿ ಈ ಘಟನೆ ಸಂಭವಿಸಿದೆ ಎಂದು ಸುರೇಶ್ ವಿಡಿಯೋ ಸಂದೇಶದಲ್ಲಿ ಹೇಳಿಕೆ ನೀಡಿದ್ದರು.
ಆದರೆ ಮೃತ ದೇವರಾಜ್ ಮಡದಿ ಇದೀಗ ನೀಡಿರುವ ದೂರಿನ ಎಫ್ ಐಆರ್ ನಲ್ಲಿ ದೇವರಾಜ್ ಅವರು ಹಿಂಬದಿ ಕುಳಿತಿದ್ದರು. ಸುರೇಶ್ ಎಂಬುವವರು ಬೈಕ್ ಚಾಲನೆ ಮಾಡುತ್ತಿದ್ದರು ಎಂದು ಹೇಳಿಕೆ ದಾಖಲಾಗಿದೆ.
ಹೀಗಾಗಿ ಈ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.