ಅಪಘಾತ: ನಾಲ್ವರ ಯುವ ಕ್ರಿಕೆಟಿಗರ ಸಾವು

ಅಮರಾವತಿ,ಫೆ.೧೯-ಮಹಾರಾಷ್ಟ್ರದ ನಂದಗಾಂವ್ ಖಂಡೇಶ್ವರ ತಾಲೂಕಿನ ಶಿಂಗಣಾಪುರ ಬಳಿ ಕಾಂಕ್ರೀಟ್ ಮಿಕ್ಸರ್ ಟ್ರಕ್‌ಗೆ ಮಿನಿ ಬಸ್ ಮುಖಾಮುಖಿ ಡಿಕ್ಕಿ ಹೊಡೆ ಪರಿಣಾಮ ನಾಲ್ವರು ಯುವ ಕ್ರಿಕೆಟಿಗರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟೆನಿಸ್-ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಯವತ್ಮಾಲ್‌ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ

ಮೃತಪಟ್ಟ ಯುವ ಕ್ರಿಕೆಟಿಗರನ್ನು ಶ್ರೀಹರಿ ರಾವುತ್, ಜ್ಯೂಷ್ ಬಹಲೆ, ಸುಯಶ್ ಅಂಬಾರ್ಟೆ ಮತ್ತು ಸಂದೇಶ್ ಪದಾರ್ ಎಂದು ಗುರುತಿಸಲಾಗಿದೆ.ಗಾಯಗೊಂಡ ಕೆಲ ಆಟಗಾರರನ್ನು ತಾಲೂಕು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಕೆಲವರನ್ನು ಅಮರಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಂಗಾವ್‌ನಲ್ಲಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಬಸ್ ಕಾಂಕ್ರೀಟ್ ಮಿಕ್ಸರ್ ಟ್ರಕ್‌ಗೆ ಡಿಕ್ಕಿ ಹೊಡೆದು ಈ ದುರಂತ ಸಂಭಿಸಿದ್ದರು,ಮೃತ ಯುವ ಕ್ರಿಕೆಟ್ ಆಟಗಾರರ ಕುಟುಂಬದ ಸದಸ್ಯರ ಆಂಕ್ರಂದನ ಮುಗಿಲು ಮುಟ್ಟಿದೆ.

ಗಂಭೀರವಾಗಿ ಗಾಯಗೊಂಡಿರುವ ಕ್ರಿಕೆಟಿಗರನ್ನು ಪ್ರಜ್ವಲ್ ಬುಚೆ, ಲೌಕಿಕ್ ಪೇಮಾಸೆ, ಮಯೂರ್ ನಾಗ್ಪುರೆ, ಮಂಗೇಶ್ ಪಾಂಡೆ ಮತ್ತು ಹರೀಶ್ ಧಾಗೆ ಎಂದು ಪೊಲೀಸರು ಗುರುತಿಸಿದ್ದಾರೆ.

ಭೂಷಣ್ ಪಿವಾಸ್ಕರ್, ಪ್ರಜ್ವಲ್ ಕೋಚೆ, ಪ್ರಣಯ್ ಯೇವತಿಕರ್, ಧೀರಜ್ ರಾವುತ್, ವೇದಾಂತ್ ಅಖರೆ, ಸೌರಭ್ ಕುಮ್ರೆ, ಓಂ ಅಟಲ್ಕರ್, ಹರಿಓಂ ಲುಂಗೆ, ಭೂಷಣ್ ಪದಾರ್, ಜಲ ದೇಶಮುಖ್, ಅಕ್ಷಯ್ ಚೌಧರಿ, ಸಂಕೇತ್ ಚಾವಡೆ, ಅನಿರುದ್ಧ್ ಅಕ್ರೆ, ಸುಬೋಧ್ ಕತ್ರೆ, ಪೊಲೀಸ್ ರಹೀಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.