ಅಪಘಾತ ಗಾಯಾಳುಗಳಿಗೆ ಜೆಡಿಎಸ್ ಮಂಜುನಾಥ್ ಸಾಂತ್ವನ

ಹನೂರು, ನ.8: ಶವ ಸಂಸ್ಕಾರ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಈಚರ್ ವಾಹನ ಮಗುಚಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಜೆಡಿಎಸ್ ರಾಜ್ಯ ಉಪಾಧ್ಯಕ್ಷಆರ್.ಮಂಜುನಾಥ್ ಹನೂರು ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳಿಗೆ ಸಾಂತ್ವಾನ ತಿಳಿಸಿದರು. ಅಲ್ಲದೇ ತುರ್ತು ಅವಶ್ಯಕತೆ ಇರುವ ಗಾಯಾಳುಗಳಿಗೆ ಕಾಮಗೆರೆ, ಕೊಳ್ಳೇಗಾಲ, ಚಾಮರಾಜಗರ ಆಸ್ಪತ್ರೆಗಳಿಗೆ ತೆರಳಲು ವಾಹನದ ವ್ಯವಸ್ಥೆಯನ್ನು ಮಾಡಿದರು. ಗಾಯಾಳುಗಳ ಯೋಗ ಕ್ಷೇಮವನ್ನು ನೋಡಿಕೊಳ್ಳಿ ಎಂದು ವೈದ್ಯರಿಗೆ ತಿಳಿಸಿದರು. ಇದೇ ವೇಳೆ ಗಾಯಾಳುಗಳಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲು ಆರ್ಥಿಕ ನೆರವನ್ನು ಒದಗಿಸಿದರು.