ಅಪಘಾತ: ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿದ ನಟ ಅಜೇಯ್ ರಾವ್

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.21 :- ಮೈಸೂರಿನಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಕಾರೊಂದು ಹೈವೇ 50ರಲ್ಲಿ ಪಲ್ಟಿಯಾಗಿ ಬೆಂಗಳೂರು ಕಡೆ ಹೋಗುವ ರಸ್ತೆಕಡೆಗೆ ಬಿದ್ದಿದ್ದು ಅದರಲ್ಲಿದ್ದ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಹೆದ್ದಾರಿ ಸಹಾಯಕರು ಕಾರಿನಿಂದ ಅವರನ್ನು ಇಳಿಸಿ ರಕ್ಷಿಸುವ ಸಂದರ್ಭದಲ್ಲಿ ಹೊಸಪೇಟೆಯಿಂದ ಬೆಂಗಳೂರು ಕಡೆ ಹೊರಟಿದ್ದ ಎಕ್ಸ್ ಕ್ಯೂಜಮಿ ಹೀರೋ ನಟ  ಅಜಯರಾವ್ ಅಪಘಾತದ ಸ್ಥಳದ ಹತ್ತಿರ ತಮ್ಮ ಕಾರ್ ನಿಲ್ಲಿಸಿ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಿಂದ ಔಷಧಿ ತಂದು ತಾವೇ   ಗಾಯಾಳುಗಳಿಗೆ ಹಚ್ಚಿ ಮಾನವೀಯತೆ ಮೆರೆದ ಘಟನೆ ಸೋಮವಾರ ಸಂಜೆ ಕೂಡ್ಲಿಗಿ ತಾಲೂಕಿನ  ಹೊಸಹಳ್ಳಿ ಸಮೀಪ  ಜರುಗಿತು.         ಸೋಮವಾರ ಸಂಜೆ ತಾಲೂಕಿನ ಹೊಸಹಳ್ಳಿ  ಹೊರಹೊಲಯದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮೈಸೂರಿನಿಂದ ಹೊಸಪೇಟೆ ಕಡೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಆ ಕಾರಿನಲ್ಲಿದ್ದ ಪ್ರಾಧ್ಯಾಪಕರು ಹಾಗೂ ಇತರರಿಗೆ  ಸಣ್ಣಪುಟ್ಟ ಗಾಯಗಳಾಗಿದ್ದು,  ಅದೇ ಮಾರ್ಗವಾಗಿ ಬೆಂಗಳೂರಿಗೆ ಕಡೆ ಕಾರಿನಲ್ಲಿ ಹೋಗುತ್ತಿದ್ದ ಎಕ್ಸಕ್ಯೂಸ್ ಮಿ, ತಾಜ್ ಮಹಲ್ ಬ್ರೇಕಿಂಗ್ ನ್ಯೂಸ್ ಚಿತ್ರಗಳ  ಖ್ಯಾತಿಯ ನಮ್ಮ ಹೊಸಪೇಟೆ ಭಾಗದವರೇ ಆದ ಸ್ಯಾಂಡಲ್ ವುಡ್ ನಟ ಅಜಯ್ ರಾವ್   ಜನಸಂದಣಿ ಕಂಡು ಕಾರು ನಿಲ್ಲಿಸಿ ನೋಡಿ ಕಾರು ಪಲ್ಟಿಯಾದ ಗಾಯಾಳುಗಳಿಗೆ ತನ್ನ ಕಾರ್ ನಲ್ಲಿದ್ದ ಪ್ರಥಮ ಚಿಕಿತ್ಸಾ  ಪೆಟ್ಟಿಗೆಯಿಂದ ತಾವೇ  ಖುದ್ದಾಗಿ ಹೆದ್ದಾರಿ ಸಹಾಯಕರ ಜೊತೆಗೂಡಿ ಗಾಯಾಳುಗೆ ಬ್ಯಾಂಡೇಸ್ ಮಾಡಿ ಚಿಕಿತ್ಸೆ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಮೊದಲಿಗೆ ಮಾಸ್ಕ್ ಹಾಕಿಕೊಡದಿದ್ದರಿಂದ ನಟನೆಂದು ಗುರುತಿಸಲಿಲ್ಲ ಅದರಲ್ಲಿದ್ದ ಹೆದ್ದಾರಿ ಸಹಾಯಕ ದಯಾನಂದ ಸಜ್ಜನ್ ಅಜಯರಾವ್ ನನ್ನು ಗುರುತಿಸಿದ್ದರಿಂದ ಮಾತಿಗಿಳಿದ ನಟ ಅಜಯರಾವ್ ಹೆದ್ದಾರಿ ಸಹಾಯಕರೊಂದಿಗೆ ಈ ಉತ್ತಮ ಕಾರ್ಯಮಾಡಿದ್ದು ನನ್ನ ಪುಣ್ಯ ಎಂದು ನೆನಪಿಸಿ ಹೆದ್ದಾರಿ 50ರ ಸಹಾಯಕರ ಬಗ್ಗೆ ಕೇಳಿದ್ದೆ ನೋಡಿರಲಿಲ್ಲ ಇಂದು ನಿಮ್ಮ ಜೊತೆ ನನಗೂ ಸೇರಿ ಗಾಯಾಳುಗಳನ್ನು ಉಪಚರಿಸಿದ ಪುಣ್ಯ ಸಿಕ್ಕಿತು ಎಂದು ಹೆದ್ದಾರಿ ಸಹಾಯಕರ ಮಾನವೀಯ ಕಳಕಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರೂಪಿನ ಎಲ್ಲಾ ಹೆದ್ದಾರಿ ಸಹಾಯಕರಿಗೆ ಅಭಿನಂದನೆ ತಿಳಿಸಿದ ನಟ ಅಜೇಯರಾವ್ ಹೆದ್ದಾರಿ ಸಹಾಯಕರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.
ಈ  ಸಂದರ್ಭದಲ್ಲಿ ಹೆದ್ದಾರಿ50 ಸಹಾಯಕರ ಮುಖ್ಯಸ್ಥರಾದ, ದಯಾನಂದ ಸಜ್ಜನ್, ಶ್ರೀಕಂಠ ಸ್ವಾಮಿ, ಟೀ ಸ್ಟಾಲ್ ಬಾಬು, ಸಕಲಾಪುರದಹಟ್ಟಿ ಬಸಣ್ಣ, ಪೆಟ್ರೋಲ್ ಬಂಕ್ ಬೀಮಣ್ಣ ಹೊಸಹಳ್ಳಿ ಪಿಎಸೈ ತಿಮ್ಮಣ್ಣ ಚಾಮನೂರು ಎ ಎಸ್ ಐ ಮೋಹನ್, ಹೋಂಗಾರ್ಡಸ್ವಾಮಿ  ,ಪೇದೆ ಬೋಜನಾಯ್ಕ, ಚಂದ್ರಶೇಖರ್, ಲೋಕೇಶ್ ಮಾಸ್ಟರ್ ಸೇರಿದಂತೆ ಇತರರಿದ್ದರು.