ಅಪಘಾತ: ಎಸ್.ಐ. ಸಾವು

ಹುಬ್ಬಳ್ಳಿ,ಏ30: ರಸ್ತೆ ಅಪಘಾತದಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಓರ್ವರು ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಕಿರೇಸೂರ ಗ್ರಾಮದ ಬಳಿ ಸಂಭವಿಸಿದೆ.
ನವಲಗುಂದ ಬಳಿಯ ಕುಮಾರಗೊಪ್ಪ ನಿವಾಸಿ, ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಿ ಸೇವೆಯಲ್ಲಿದ್ದ ಮಲ್ಲಿಕಾರ್ಜುನ ಕುಲಕರ್ಣಿಯವರೇ ಸಾವನ್ನಪ್ಪಿದವರು.