ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಹುಬ್ಬಳ್ಳಿ,ಏ10: ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಎರಡು ಲಾರಿಯ ಚಾಲಕರು ಗಂಭೀರ ಗಾಯಗೊಂಡಿರುವ ಘಟನೆ ನಿನ್ನೆ ತಡರಾತ್ರಿ ಹುಬ್ಬಳ್ಳಿ ಧಾರವಾಡ ಬೈಪಾಸ್ ಬಳಿ ನಡೆದಿದೆ.
ಪುನಾದಿಂದ ಬೆಂಗಳೂರಿಗೆ ಹೊರಟಿದ್ದ ಹಾಗೂ ಬೆಂಗಳೂರಿನಿಂದ ಪುನಾಗೆ ಹೊರಟಿದ್ದ ಲಾರಿಗಳು, ಬೈಪಾಸ್‍ನಲ್ಲಿ ಮುಖಾಮುಖಿ ಡಿಕ್ಕಿ ಯಾಗಿದ್ದು, ಅಪಘಾತದಲ್ಲಿ ಲಾರಿಯ ಚಾಲಕನೊರ್ವ ಲಾರಿಯಲ್ಲೇ ಸಿಲುಕಿಕೊಂಡಿದ್ದು, ಕೂಡಲೇ ಹುಬ್ಬಳ್ಳಿಯ ಗ್ರಾಮೀಣ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಮುಖಾಂತರ ಚಾಲಕನನ್ನು ಹೊರತೆಗೆಯಲಾಯಿತು.
ಅಪಘಾತದಲ್ಲಿಗಾಯಗೊಂಡವರನ್ನು ಕಿಮ್ಸ್ ಗೆ ದಾಖಲಿಸಲಾಗಿದೆ. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.