ಅಪಘಾತದ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ಮಾರ್ಗೊಪಾಯ ಹುಡುಕಿಃ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ, ಸೆ.25- ಜಿಲ್ಲೆಯಲ್ಲಿ 2020 ಹಾಗೂ 2021 ನೇ ವರ್ಷಕ್ಕೆ ಹೋಲಿಕೆ ಮಾಡಲಾಗಿ 2021 ರಲ್ಲಿ ಅಪಘಾತ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಅಪಘಾತಗಳ ಸಂಖ್ಯೆಯನ್ನು ಹಾಗೂ ಅಪಘಾತಕ್ಕೆ ಕಾರಣಗಳನ್ನು ಪಟ್ಟಿ ಮಾಡಿ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಕಳೆದ 2020 ಹಾಗೂ 2021 ರ ವರೆಗೆ ತುಲನಾತ್ಮಕವಾಗಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತಗಳ ಅಂಕಿ ಅಂಶಗಳಲ್ಲಿ ಹೆಚ್ಚಳವಾಗಿದೆ.
2020 ನೇ ವರ್ಷಕ್ಕೆ ಹಾಗೂ 2021 ನೇ ವರ್ಷಕ್ಕೆ ಪ್ರವರ್ತನ ಪ್ರಕರಣಗಳನ್ನು ಪರಿಶೀಲಿಸಿದಾಗ ಕಾರ್ಯನಿರ್ವಾಹಕರ ಕೊರತೆಯ ನಡುವೆಯು 2021 ನೇ ವರ್ಷದಲ್ಲಿ ಹೆಚ್ಚು ವಾಹನಗಳನ್ನು ತಪಾಸಿಸಿ ಪ್ರಕರಣಗಳ ಸಂಖ್ಯೆ ಮತ್ತು ರಾಜಸ್ವವನ್ನು ಹೆಚ್ಚಾಗಿ ವಸೂಲಿ ಮಾಡಲಾಗಿದೆ. ಹಾಗೂ ಇನ್ನು ಮುಂದಿನ ದಿನಗಳಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು ನಿದಿಪಡಿಸಿದ ಗುರಿಯನುಸಾರ ಪ್ರಕರಣಗಳನ್ನು ದಾಖಲಿಸಿ ರಾಜಸ್ವ ವಸೂಲಾತಿಗಾಗಿ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ಅದರಂತೆ ಪೆÇಲೀಸ ಇಲಾಖೆಯಿಂದ ಚಾಲನಾ ಅನುಜ್ಞಾ ಪತ್ರಗಳನ್ನು ಅಮಾನತ್ತು ಪಡಿಸುವಂತೆ ಬಂದ ಪತ್ರಗಳನುಸಾರ ಜನೇವರಿ-2021 ರಿಂದ ಅಗಷ್ಟ-2021 ರವರೆಗೆ ಒಟ್ಟು 92 ಚಾಲನಾ ಅನುಜ್ಞಾ ಪತ್ರಗಳನ್ನು ಅಮಾನತ್ತುಪಡಿಸಲಾಗಿದೆ.
ದಿನಾಂಕ: 06-10-2020 ರ ಸಭೆಯಲ್ಲಿ ಪೆÇಲೀಸ್ ಇಲಾಖೆಯಿಂದ 14 ಕಪ್ಪುಚುಕ್ಕೆ ಸ್ಥಳಗಳನ್ನು ಗುರುತಿಸಲಾಗಿತ್ತು. ಈ ಕಪ್ಪು ಚುಕ್ಕೆ ಸ್ಥಳಗಳನ್ನು ಸರಿಪಡಿಸಿರುವುದಾಗಿ ದಿನಾಂಕ: 10-02-2021 ರ ಸಭೆಯಲ್ಲಿ ಸಂಬಂಧಿಸಿದ ಇಲಾಖೆಗಳು ಸಭೆಗೆ ಮಾಹಿತಿ ಪಡೆದು, ಅವುಗಳ ಕಾಮಗಾರಿ ಪೂರ್ಣಗೊಂಡ ಬಗ್ಗೆ ಪರಿಶೀಲಿಸಿ, ಕಪ್ಪು ಚುಕ್ಕೆ ಪಟ್ಟಿಯಿಂದ ಕೈಬಿಡಲು ಸೂಚಿಸಿದರು.
ಚುಕ್ಕೆ ಸ್ಥಳ ಹೊರ್ತಿ ಹತ್ತಿರ ರಾಷ್ಟ್ರೀಯ ಹೆದ್ದಾರಿ ಚತುಸ್ಸೇನ ರಸ್ತೆ ಕಾಮಗಾರಿ ನಡೆದಿದ್ದು ಕಪ್ಪು ಚುಕ್ಕೆ ಸ್ಥಳವನ್ನು ಸರಿಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೋಲ್ಲಾಪೂರ ಇವರು ಕಳೆದ ಸಭೆಯಲ್ಲಿ ಮಾಹಿತಿ ನೀಡಿದ್ದು ಈ ಕಾಮಗಾರಿಯನ್ನು ಪರಿಶೀಲಿಸಿ ವರದಿ ನೀಡುವಂತೆ ಪೆÇಲೀಸ್ ಇಲಾಖೆ ಸೂಚಿಸಲಾಗಿತ್ತು.
ಈ ಕಾಮಗಾರಿ ಪೂರ್ಣಗೊಂಡ ಬಗ್ಗೆ ಹಾಗೂ ಕಪ್ಪು ಸ್ಥಳ ಸರಿಪಡಿಸಿದ ಬಗ್ಗೆ ಹಾಗೂ ಸಿಂದಗಿ ಬೈಪಾಸ್ ರಸ್ತೆ, ಬೊಮ್ಮನಜೋಗಿ ಕ್ರಾಸ್, ಚಿಕ್ಕ ಸಿಂದಗಿ ಕ್ರಾಸ್, ದೇವರ ಹಿಪ್ಪರಗಿ ಹತ್ತಿರ, ಈ ಸ್ಥಳಗಳಲ್ಲಿನ ಕಪ್ಪು ಚುಕ್ಕೆಗಳನ್ನು ಸರಿಪಡಿಸಲಾಗಿದೆ ಎಂದು ಹಿಂದಿನ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಲಬುರಗಿ ಇವರು ತಿಳಿಸಿರುವುದರಿಂದ ಈ ಸ್ಥಳಗಳನ್ನು ಚುಕ್ಕೆ ಸ್ಥಳಗಳ ಪಟ್ಟಿಯಿಂದ ಕೈಬಿಡಲು ಸಭೆಯಲ್ಲಿ ತಿಳಿಸಿದರು.
ಸೈನಿಕ್ ಸ್ಕೂಲ್ ಮೇನ್ ಗೇಟ್ ಹತ್ತಿರ, ಮಲಘಾಣ ಕ್ರಾಸ್, ಮುಳವಾಡ ಕ್ರಾಸ್, ಕೂಡಗಿ ಕ್ರಾಸ್, ಶರ್ಮಾ ದಾಬಾ ಹತ್ತಿರ, ಹಿಟ್ನಳ್ಳಿ ಗ್ರಾಮದ ಹತ್ತಿರ, ಜುಮನಾಳ ಕ್ರಾಸ್ ಹತ್ತಿರ, ತೋರವಿ ಲಕ್ಷ್ಮೀ ದೇವಸ್ಥಾನದ ಹತ್ತಿರ ಈ ಮೇಲಿನ ಎಂಟು ಸ್ಥಳಗಳಲ್ಲಿ ಕಪ್ಪು ಚುಕ್ಕೆಗಳನ್ನು ಸರಿಪಡಿಸಲಾಗಿದೆ ಎಂದು ಹಿಂದಿನ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿರುವುದರಿಂದ ಈ ಸ್ಥಳಗಳನ್ನು ಕಪ್ಪು ಚುಕ್ಕೆ ಸ್ಥಳದಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.
ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿತ್ತು. ಅದರಂತೆ ಕ್ರಮ ವಹಿಸಿದ ಬಗ್ಗೆ ತಿಳಿಸಿದರು.
ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಕ್ರಮ ವಹಿಸಿದ ಬಗ್ಗೆ ಚರ್ಚಿಸಿ, ಎಲೆಕ್ಟ್ರಾನಿಕ್ ಎನ್‍ಪೆÇೀರ್ಸಮೆಂಟ್ ಬಗ್ಗೆ ವಿವರವಾಗಿ ತಿಳಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಮೇಲೆ ಒಳಚರಂಡಿ ಮ್ಯಾನ್ ಹೋಲ್‍ಗಳನ್ನು ದುರಸ್ಥಿ ಮಾಡಿ ಎಲ್ಲಾ ಮ್ಯಾನಹೋಲ್‍ಗಳ ಮುಚ್ಚಳವನ್ನು ಮುಚ್ಚಲು, ಬ್ಲಾಕ್ ಸ್ಪಾಟ್‍ಗಳನ್ನು ರಿಪೇರಿ ಮಾಡಿ ತಗ್ಗುಗುಂಡಿಗಳನ್ನು ಮುಚ್ಚುವಂತೆ ಹಾಗೂ ಬೀದಿ ದೀಪಗಳನ್ನು ದುರಸ್ಥಿಗೊಳಿಸುವಂತೆ ಸೂಚಿಸಲಾಗಿತ್ತು. ಹಾಗೂ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರ ಪಾಲುದಾರಿಕೆ ಇಲಾಖೆಗಳಾದ ಸಾರಿಗೆ, ಪೆÇೀಲೀಸ್, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ, ಸ್ಥಳಿಯ ನಗರಾಡಳಿತ ಮುಂತಾದ ಇಲಾಖೆಗಳು ರಸ್ತೆ ಸುರಕ್ಷತೆಯ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕಾರ್ಯಕ್ರಮಗಳ ಪಟ್ಟಿ ತಯಾರಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಅಪಘಾತ ಸ್ಥಳಗಳಿಗೆ ಪರಿಶೀಲನಾ ತಂಡ (ಪೆÇಲೀಸ್,ಸಾರಿಗೆ, ಲೋಕೊಪಯೋಗಿ ಇಲಾಖೆ)ಗಳು ಭೇಟಿ ನೀಡಿ ಅಪಘಾತಕ್ಕೆ ನಿಖರ ಕಾರಣಗಳನ್ನು ಕಂಡುಕೊಂಡು ಈ ರೀತಿ ಪದೇ ಪದೇ ಅಪಘಾತ ಸಂಭವಿಸಲು ಪ್ರಮುಖ ಕಾರಣಗಳನ್ನು ಪತ್ತೆ ಮಾಡುವದು ಹಾಗೂ ಅಪಘಾತಗಳನ್ನು ತಡೆಗಟ್ಟಲು ಕಾರ್ಯಯೋಜನೆಯ ಹಮ್ಮಿಕೊಳ್ಳುವ ಕುರಿತು ಪ್ರಾಧಿಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಆನಂದ ಕುಮಾರ್ ಅವರು ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಗುಣಮಟ್ಟದ ರೀತಿಯಲ್ಲಿ ಕೈಗೊಳ್ಳುವುದರ ಜೊತೆಗೆ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಮತ್ತು ಅಪಘಾತ ಸಂಭವಿಸುವ ಪ್ರದೇಶಗಳಲ್ಲಿ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸಹಾಯವಾಣಿ ಮೊಬೈಲ್ ನಂಬರ್‍ಗಳನ್ನು ಒಳಗೊಂಡ ಬೋರ್ಡ್‍ಗಳ ಹಾಗೂ ಬ್ಯಾನರ್‍ಗಳನ್ನು ಅಳವಡಿಸಬೇಕೆಂದು ಅವರು ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯ ಮೆಕ್ಕಳಕಿ ಸೇರಿದಂತೆ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.