ಅಪಘಾತದಲ್ಲಿ ವ್ಯಕ್ತಿಯ ಸಾವು: ಸವಾರನಿಗೆ ಶಿಕ್ಷೆ

ಕಲಬುರಗಿ,ಫೆ 22: ವೇಗವಾಗಿ ಬೈಕ್ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಉಮಾಪತಿ ಮಲ್ಲಿಕಾರ್ಜುನ ಗಣಾಪುರ ಎಂಬುವವರಿಗೆ 6 ತಿಂಗಳು ಸಾದಾಶಿಕ್ಷೆ 1 ಸಾವಿರ ರೂ ದಂಡ,ಐಪಿಸಿ 304 (ಎ)ಅಡಿಯಲ್ಲಿನ ಅಪರಾಧಕ್ಕೆ 10 ಸಾವಿರ ರೂ ದಂಡ ಮತ್ತು 2 ವರ್ಷ ಸಾದಾ ಶಿಕ್ಷೆ ವಿಧಿಸಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಸುಶಾಂತ ಎಂ ಚೌಗಲೆ ಅವರು ಆದೇಶ ನೀಡಿದ್ದಾರೆ.
2012 ರ ಮೇ 5 ರಂದು ಉಮಾಪತಿ ಗಣಾಪುರ ನಿರ್ಲಕ್ಷ್ಯ ಹಾಗೂ ವೇಗವಾಗಿ ಬೈಕ್ ಚಲಾಯಿಸಿ ಹಡಗಿಲ ಹಾರುತಿ ಬಳಿ ನಾಗೇಂದ್ರಪ್ಪ ಎಂಬುವವರಿಗೆ ಅಪಘಾತ ಮಾಡಿದ್ದರು.ಅಪಘಾತದಲ್ಲಿ ಗಾಯಗೊಂಡ ನಾಗೇಂದ್ರಪ್ಪ ಆಸ್ಪತ್ರೆಯಲ್ಲಿ ಮೃತರಾಗಿದ್ದರು.ಈ ಕುರಿತು ಸಂಚಾರ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿತ್ತು.ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿನಾಯಕ ಎಸ್ ಕೋಡ್ಲಾ ವಾದ ಮಂಡಿಸಿದ್ದರು.