ಅಪಘಾತದಲ್ಲಿ ಮೊಮ್ಮಗನ ಸಾವಿನಿಂದ ಆಘಾತ ತಾತ ಸಾವು

ವಿಜಯಪುರ:ಮಾ.1: ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಮೊಮ್ಮಗನ ಮೃತ ದೇಹ ಕಂಡು ತಾತನೊಬ್ಬ ಹೃದಯಾಘಾತಕ್ಕೆ ಒಳಗಾಗಿ ಆತನು ಮೊಮ್ಮಗನ ಜತೆ ಇಹಲೋಕ ತ್ಯಜಿಸಿದ ಘಟನೆ ಜಿಲ್ಲೆಯ ಗೊಳಸಂಗಿ ಸಮೀಪದ ವಂದಾಲ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ವಂದಾಲ ಗ್ರಾಮದ ಅಭಿಷೇಕ ಚಂದ್ರಶೇಖರ ಪ್ಯಾಟಿಗೌಡ್ರ (18) ಗುಳೇದಗುಡ್ಡದ ಅವರ ಚಿಕ್ಜಮ್ಮನ ಮನೆಯಲ್ಲಿ ಇದ್ದುಕೊಂಡು ಪಿಯು ದ್ವೀತಿಯ ಅಭ್ಯಾಸಿಸುತ್ತಿದ್ದನು.ಸೋಮವಾರ ರಾತ್ರಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಟಿಪ್ಪರ ಲಾರಿಗೆ ಡಿಕ್ಕಿ ಹೊಡೆದು ಅಭಿಷೇಕ ಸ್ಥಳದಲ್ಲಿ ಸಾವನ್ನಪ್ಪಿದ್ದನು.
ಸುದ್ದಿ ತಿಳಿದ ಕುಟುಂಬದ ಸದಸ್ಯರ ಜತೆ ವಂದಾಲದಲ್ಲಿದ್ದ ಮೃತ ಅಭಿಷೇಕನ ತಾಯಿಯ ತಂದೆ, ಹುನಗುಂದ ತಾಲೂಕು ಅಮೀನಗಡದ ಬಸಪ್ಪ ರಾಮಪ್ಪ ಗುಡ್ಡದ (74) ಇವರು ಗುಳೇದಗುಡ್ಡಕ್ಕೆ ಬಂದಿದ್ದಾರೆ.
ಅಲ್ಲಿ ಮೊಮ್ಮಗ ಅಭಿಷೇಕ ಮೃತದೇಹ ನೋಡಿದ ತಾತ ಬಸಪ್ಪ ಗುಡ್ಡದ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಧ್ಯೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.ಮೊಮ್ಮಗ ಹಾಗೂ ತಾತನ ಅಂತ್ಯಕ್ರಿಯೆಯನ್ನು ವಂದಾಲ ಗ್ರಾಮದಲ್ಲಿ ರಾತ್ರಿ ನೆರವೇರಿತು.