ಅಥಣಿ :ಸೆ.22: ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ ಭೀಕರ ರಸ್ತೆ ಅಪಘಾತದಲ್ಲಿ ತಾಲೂಕಿನ ಬಡಚಿ ಗ್ರಾಮದ ಆಜೂರ ಮನೆತನದ 5 ಜನ ಹಾಗೂ ಜಾಧವ ಮನೆತನದ ಓರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಅವರು ಬಡಚಿ ಗ್ರಾಮದಲ್ಲಿರುವ ಆಜೂರ ಮತ್ತು ಜಾಧವ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು,
ಈ ವೇಳೆ ಮಾತನಾಡಿದ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ ಬರುವ ಸಮಯದಲ್ಲಿ ಲಾರಿ ಮತ್ತು ಟ್ರಾಕ್ಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಡಚಿ ಗ್ರಾಮದ ಆರು ಜನ ಮೃತಪಟ್ಟಿದ್ದು ಅತ್ಯಂತ ಖೇದಕರ ಘಟನೆಯಾಗಿದೆ. ಈ ದುರ್ಘಟನೆಯಲ್ಲಿ ಆಜೂರ ಕುಟುಂಬದ 5 ಜನ ಹಾಗೂ ಜಾಧವ ಕುಟುಂಬದ ಒಬ್ಬರು ಮೃತಪಟ್ಟಿದ್ದು ಮನ ಕಲಕುವ ಘಟನೆಯಾಗಿದ್ದು, ಈ ದುರ್ಘಟನೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ, ಈ ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನನಗೆ ನಂಬಲಾಗಲಿಲ್ಲ. ನಾನು ಶಾಸಕನಾದ ಸಂದರ್ಭದಲ್ಲಿ ಆಜೂರ ಮತ್ತು ಜಾಧವ ಕುಟುಂಬದವರು ನನ್ನೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು.
ಈ ಭೀಕರ ದುರ್ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಆ ಭಗವಂತನು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಪರಿಹಾರ ನೀಡಲು ಸರ್ಕಾರಕ್ಕೆ ವಿನಂತಿ :
ಈ ಕೂಡಲೇ ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ಅಪಘಾತದಲ್ಲಿ ಮೃತಪಟ್ಟ ಬಡ ರೈತ ಕುಟುಂಬಕ್ಕೆ ಹಾಗೂ ಬಡ ಚಾಲಕನ ಕುಟುಂಬದವರಿಗೆ ಪಿ ಎಂ ಕೇರ್ ಫಂಡ್ ದಿಂದಾಗಲಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಇಂದಾಗಲಿ ಅಥವಾ ಲಭ್ಯವಿರುವ ಮೂಲಗಳಿಂದ ಶೀಘ್ರದಲ್ಲಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು,
ಈ ವೇಳೆ ಗ್ರಾಪಂ ಅಧ್ಯಕ್ಷ ಬೀರಪ್ಪ ಪೂಜಾರಿ, ಮಲ್ಲಪ್ಪಾ ಆಜೂರ. ಶಿದ್ದೋಬಾ ಜಾಧವ. ಹಣಮಂತ ಲೆಂಡೆ. ಕಾಸೀಮ್ ನದಾಫ. ದೀಪಕ ಸೂರ್ಯವಂಶಿ. ಗುರುನಿಂಗ ಹಂಡಗಿ. ಸದಾಶಿವ ಜಾಧವ. ನರಸಪ್ಪ ಈಚೇರಿ, ಸೇರಿದಂತೆ ಹಲವರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.