
ಬಸವಕಲ್ಯಾಣ:ಮೇ.25: ಸಸ್ತಾಪುರ ಬಂಗ್ಲಾ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ. ಮೂರು ವರ್ಷದ ಮಗು ಬದುಕುಳಿದಿದೆ.
ತಾಲ್ಲೂಕಿನ ಜೋಗೆವಾಡಿ ಗ್ರಾಮದ ಗುಂಡಪ್ಪ ಚಿಟ್ಟಂಪಲ್ಲೆ (33) ಹಾಗೂ ಅವರ ಪತ್ನಿ ಸುಜಾತಾ (29) ಮೃತಪಟ್ಟವರು.
ಅವರ ಜತೆಯಲ್ಲಿದ್ದ ಮೂರು ವರ್ಷದ ಮಗು ಶ್ರೀಹರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗುಂಡಪ್ಪ ಸ್ಥಳದಲ್ಲೇ ಮೃತಪಟ್ಟರೆ ಸುಜಾತಾ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬೈಕ್‍ಗೆ ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.