ಅಪಘಾತದಲ್ಲಿ ಗಾಯಗೊಂಡಿದ್ದ ನ್ಯಾಯವಾದಿ ಸಾವು

ಕಲಬುರಗಿ,ಮೇ.5-ಸೇಡಂ ರಸ್ತೆಯ ಗೀತಾ ನಗರ ಹತ್ತಿರ ಕಳೆದ ತಿಂಗಳು 23 ರಂದು ಕಾರು ಮತ್ತು ಬೈಕ್ ನಡುವೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನ್ಯಾಯವಾದಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮುಗಳಿ ಗ್ರಾಮದ ಸಿದ್ರಾಮಪ್ಪ ತಂದೆ ನಿಂಗಪ್ಪ ಮೃತಪಟ್ಟವರು.
ಸೇಡಂ ರಸ್ತೆಯ ಗೀತಾ ನಗರ ಹತ್ತಿರ ಏ.23 ರಂದು ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಶ್ರೀಶೈಲ ತಂದೆ ಜಗನ್ನಾಥ ಎಂಬ 6 ವರ್ಷದ ಬಾಲಕ ಮೃತಪಟ್ಟಿದ್ದ. ಸತೀಶ ತಂದೆ ಶರಣಪ್ಪ ಎಂಬುವವರು ಗಾಯಗೊಂಡಿದ್ದರು. ಇವರು ಬೈಕ್ ಮೇಲೆ ವಚ್ಚಾ ಗ್ರಾಮಕ್ಕೆ ಹೊರಟಿದ್ದರು. ಈ ವೇಳೆ ಗೀತಾ ನಗರ ಹತ್ತಿರ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿತ್ತು. ಕಾರಿನಲ್ಲಿದ್ದ ನ್ಯಾಯವಾದಿ ಸಿದ್ರಾಮಪ್ಪ ಸೇರಿದಂತೆ ಮತ್ತಿತರರು ಗಾಯಗೊಂಡಿದ್ದರು. ಸಿದ್ರಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.