
ಮುಂಬಯಿ(ಮಹಾರಾಷ್ಟ್ರ), ಮೇ.೧೫-ದಿ ಕೇರಳ ಸ್ಟೋರಿ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಾಯಕ ನಟಿ ಅದಾ ಶರ್ಮಾ ರಸ್ತೆ ಅಪಘಾತಕ್ಕೀಡಾಗಿ ಗಾಯಗೊಂಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ.
ಖಾಸಗಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಗಾಯಗೊಂಡಿರುವ ನಟಿ ಅದಾ ಶರ್ಮಾ ಹಾಗೂ ಸಿನಿಮಾ ನಿರ್ದೇಶಕ ಸುದಿಪ್ತೋ ಸೇನ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇವರಿಬ್ಬರೂ ಕರೀಮ್ ನಗರದಲ್ಲಿ ನಡೆಯಬೇಕಿದ್ದ ‘ಹಿಂದೂ ಏಕತಾ ಯಾತ್ರಾ’ದಲ್ಲಿ ಭಾಗಿ ಆಗಬೇಕಿತ್ತು. ಆದರೆ, ಇದಕ್ಕೆ ತೆರಳುವುದಕ್ಕೂ ಮೊದಲೇ ರಸ್ತೆ ಅಪಘಾತ ಉಂಟಾಗಿದೆ.
ಇತ್ತೀಚೆಗೆ ತೆರೆಗೆ ಬಂದ ‘ದಿ ಕೇರಳ ಸ್ಟೋರಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ವಹಿವಾಟು ನಡೆಸಿದೆ. ಈ ಸಿನಿಮಾ ತಂಡಕ್ಕೆ ಈಗ ಅಪಘಾತ ಆಗಿದೆ.
ನಟಿ ಅದಾ ಶರ್ಮಾ ಅವರು ನಾನು ಆರೋಗ್ಯವಾಗಿದ್ದೀನಿ. ಅಪಘಾತದ ಬಗ್ಗೆ ಸುದ್ದಿ ಹಬ್ಬಿರುವುದರಿಂದ ಸಾಕಷ್ಟು ಮೆಸೇಜ್‌ಗಳು ಬರುತ್ತಿವೆ. ಇಡೀ ತಂಡ ಹಾಗೂ ನಾವು ಆರೋಗ್ಯವಾಗಿದ್ದೀವಿ. ಗಂಭೀರ ಅಪಘಾತ ಅಲ್ಲ. ನಿಮ್ಮ ಕಾಳಜಿಗೆ ಧನ್ಯವಾದ’ ಎಂದು ಅವರು ಟ್ವೀಟ್ ಮಾಡಿದ್ದಾರೆ.