ಅಪಘಾತಗಳ ಗಂಭೀರತೆ ತಡೆಯಲು ರಸ್ತೆ ಸುರಕ್ಷತಾ ನಿಯಮ ಪಾಲಿಸಿ

ಅಫಜಲಪುರ:ಆ.7: ಅಪಘಾತಗಳ ಗಂಭೀರತೆ ತಡೆಯಲು ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು
ಎಂದು ಅಫಜಲಪುರ ಪಿ.ಎಸ್.ಐ ಮಡಿವಾಳಪ್ಪ ಬಾಗೋಡಿ ತಿಳಿಸಿದರು.

ಪಟ್ಟಣದ ವಿವಿಧ ಸ್ಥಳಗಳಲ್ಲಿ ಪೆÇೀಲಿಸ್ ಠಾಣೆಯ ವತಿಯಿಂದ ಚಾಲಕರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡ “ವಾಹನ ಸವಾರರ ಸುರಕ್ಷತೆ ನಮ್ಮ ಆದ್ಯತೆ” ಎಂಬ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ವಾಹನ ಚಾಲನೆ ಮಾಡುವ ವ್ಯಕ್ತಿ ಕುಡಿದು ವಾಹನ ಚಲಾಯಿಸಬಾರದು. ತಪ್ಪದೇ ಸೀಟ್ ಬೆಲ್ಟ್ ಧರಿಸಬೇಕು. ಇದರೊಂದಿಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಡ್ರೈವಿಂಗ್ ಲೈಸನ್ಸ್ ಪಡೆದು ಪ್ರತಿ ವರ್ಷ ವಾಹನದ ವಿಮೆಯನ್ನು ನವೀಕರಿಸಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ದ್ವಿಚಕ್ರ ವಾಹನ ಚಾಲಕರು ಹಾಗೂ ಹಿಂಬದಿಯ ಸವಾರರು ಭಾರತೀಯ ಮಾನದಂಡಗಳ ಸಂಸ್ಥೆ (ಐ.ಎಸ್.ಐ) ಅಂಗೀಕೃತ ಹೆಲ್ಮೆಟ್ ಗಳನ್ನು ಧರಿಸಬೇಕು. ವೇಗದ ಮಿತಿಗಿಂತ ಅಧಿಕ ವೇಗದಲ್ಲಿ ವಾಹನ ಚಲಾಯಿಸಬಾರದು. ದ್ವಿಚಕ್ರ ವಾಹನದಲ್ಲಿ ಟ್ರಿಪಲ್ ರೈಡಿಂಗ್ ಮಾಡುವುದಾಗಲಿ ಅಥವಾ ಧ್ವನಿವರ್ಧಕವನ್ನು ಕರ್ಕಶವಾಗಿ ಬಳಸಿದರೆ ಅಂಥವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಜೀವ ಮತ್ತು ಆಸ್ತಿ ಸಂರಕ್ಷಣೆಯೇ ಪೆÇಲೀಸ್ ಇಲಾಖೆಯ ಮುಖ್ಯ ಕರ್ತವ್ಯವಾಗಿದೆ. ರಸ್ತೆ ಅಪಘಾತವೆಂಬ ಈ ಘೋರ ಸಂಕಟದಿಂದ ಪಾರಾಗಲು ಕಲಬುರಗಿ ಜಿಲ್ಲಾ ಪೆÇಲೀಸ್ ಇಲಾಖೆಯ ವತಿಯಿಂದ ಕೈಗೊಳ್ಳುತ್ತಿರುವ ಈ ಮಹಾ ಅಭಿಯಾನಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.


ರಸ್ತೆ ಅಪಘಾತಗಳಿಂದ ವ್ಯಕ್ತಿಯ ಜೀವ ಹಾಗೂ ದೈಹಿಕ ನ್ಯೂನತೆಗಳಿಗೆ ಕಾರಣವಾಗಿ ಅವರ ಕುಟುಂಬ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಹೀಗಾಗಿ ಮುಂಜಾಗೃತೆ ಹೊಂದುವುದು ಅವಶ್ಯ.

  • ಮಡಿವಾಳಪ್ಪ ಬಾಗೋಡಿ, ಪಿಎಸ್‍ಐ ಅಫಜಲಪುರ.