ಅಪಘಾತಕ್ಕೆ ಬೊಂಬೆ ಕಲಾವಿದ ವೀರಣ್ಣ ಬಲಿ

ಬಳ್ಳಾರಿ,ಏ.-೨ ಅಂತರ ರಾಷ್ಟ್ರೀಯ ಖ್ಯಾತಿ ತೊಗಲು ಗೊಂಬೆ ಕಲಾವಿದ, ನಾಡೋಜ ಬೆಳಗಲ್ಲು ವೀರಣ್ಣ ಅವರು ಇಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅವರಿಗೆ ೯೧ ವರ್ಷ ವಯಸ್ಸಾಗಿತ್ತು. ಕರ್ನಾಟಕ ಬಯಲಾಟ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಜನಪದ ಶ್ರೀ, ರಾಜ್ಯೋತ್ಸವ, ನಾಟಕ ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳಿಂದ ಸನ್ಮಾನಿತರಾಗಿದ್ದರು.
ತಮ್ಮ ಎಂಟನೇ ವಯಸ್ಸಿನಿಂದಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಗುಬ್ಬಿ ವೀರಣ್ಣ ಕಂಪನಿ ಸೇರಿದಂತೆ ಅನೇಕ ವೃತ್ತಿ ರಂಗಭುಮಿಯಲ್ಲಿ ನಟಿಸಿದ್ದರು. ಶಕುನಿ ಪಾತ್ರದಲ್ಲಿ ಅವರು ವಿಶೇಷವಾಗಿ ಅಭಿನಯಿಸುತ್ತಿದ್ದರು.

ಇಂದು ಬಳ್ಳಾರಿಯಿಂದ ಬೆಳಿಗ್ಗೆ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ಮಗ ಹನುಮಂತ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಪಘಾತವಾಗಿದೆ.ಚಳ್ಳಕೆರೆಯಲ್ಲಿ ವೀರಣ್ಣ ಅವರ ಶವ ಪರೀಕ್ಷೆ ನಡೆಸಿ ಬಳ್ಳಾರಿಗೆ ತರಲಾಗುತ್ತಿದೆ.ವೀರಭದ್ರಗೌಡ ಎನ್ ಬಳ್ಳಾರಿ