ಅಪಘಾತಕ್ಕೀಡಾಗಿದ್ದ ಕೆಂಪರಾಜು ಚಿಕಿತ್ಸೆ ಫಲಿಸದೇ ಸಾವು

ಕನಕಪುರ,ಏ.೧೧- ಅಪಘಾತದಲ್ಲಿ ಗಾಯಗೊಂಡಿದ್ದ ಪೂಜಾ ಕುಣಿತದ ಕಲಾವಿದ ಕೆಂಪರಾಜು (೪೫) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.
ಕೆಂಪರಾಜು ಕಸಬಾ ಹೋಬಳಿ ಮದುವೆ ತೆಕ್ಕಲುದೊಡ್ಡಿ ಗ್ರಾಮದವರಾಗಿದ್ದು ಪೂಜಾ ಕುಣಿತ ನಡೆಸುತ್ತಿದ್ದರು. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ.
ಕೆಲವು ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೆಂಪರಾಜು ಪೂಜಾ ಕುಣಿತದ ಕಲಾವಿದನಾಗಿದ್ದರಿಂದ ಕಬ್ಬಾಳು ದೇವಿಯ ಪೂಜೆಯನ್ನು ಕುಣಿಸುತ್ತಿದ್ದರು. ಅವರು ಮೃತಪಟ್ಟಿರುವುದಕ್ಕೆ ಕಬ್ಬಾಳು ಗ್ರಾಮದಲ್ಲಿ ದೇವಾಲಯದ ಮುಂದೆ ಪೂಜಾ ಕುಣಿತದ ಕಲಾವಿದರೆಲ್ಲಾ ಸೇರಿ ಶ್ರದ್ದಾಂಜಲಿ ಸಭೆ ನಡೆಸಿ ಮೃತರಿಗೆ ನಮನ ಸಲ್ಲಿಸಿದರು.