ಅಪಘಾತಕ್ಕಿಡಾದ ದಿನಗೂಲಿ ಕುಟುಂಬಗಳಿಗೆ ಮಾಗನೂರ ನೆರವು

(ಸಂಜೆವಾಣಿ ವಾರ್ತೆ)
ಶಹಾಪುರ:ಎ.26:ಜಮೀನುಗಳಲ್ಲಿ ದಿನಗೂಲಿಗಾಗಿ ಹೋಗುವ ವೇಳೆ ರಸ್ತೆ ಅಫಘಾತದಲ್ಲಿ ಪ್ರಾಣ ಕಳೆದುಕೊಂಡ ವಡಗೆರಾ ತಾಲೂಕಿನ ಮುನಮುಟಗಿ ಗ್ರಾಮದ ಐದು ಜನ ಕುಟುಂಬಸ್ಥರ ಮನೆಗೆ ರಾಜ್ಯ ಬಿಜೆಪಿ ರೈತ ಮೊರ್ಚಾ ಕಾರ್ಯದರ್ಶಿಗಳಾದ ಚಂದ್ರಶೇಖರಗೌಡ ಮಾಗನೂರವರು ಬೇಟಿ ನೀಡಿ ನೊಂದ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ದುಃಖ ಭರಿಸುವ ಶಕ್ತಿ ಭಗವಂತ ಕರುಣಸಲಿ ಎಂದು ಪ್ರಾರ್ಥಸುತ್ತಾ. ಪ್ರತಿ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ಮತ್ತು ಆರ್ಥಿಕ ನೇರವು ನೀಡಿ ಅವರ ಸಂಕಷ್ಟದಲ್ಲಿ ಭಾಗಿಯಾದರು. ಸರ್ಕಾರದ ವತಿಯಿಂದ ನೊಂದ ಕುಟುಂಬಗಳಿಗಾಗಿ ಪರಿಹಾರ ಕೊಡಿಸುವ ಪ್ರಯತ್ನ ಮಾಡುವದಾಗಿ ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಯಾದಗಿರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನಾರಡ್ಡಿಗೌಡ ಬಿಳ್ಹಾರ, ರವಿ ಮಾಲಿಪಾಟೀಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಕಂದಕೂರ, ಶಿವಶರಣಪ್ಪ ಸಾಹುಕಾರ ಹಯ್ಯಾಳ ಬಿ, ಚಂದ್ರಶೇಖರಗೌಡ ಮರಕಲ್, ಗುರು ದಂಡಗೊಂಡ, ಚೆನ್ನಪ್ಪ ಅಲಿಪುರ, ನಾರಾಯಣ ವಿರುಪಾಕ್ಷಪ್ಪಗೌಡ ಮತ್ತು ಬಸವರಾಜ ರಾಖಮಗೇರಾ. ಸೇರಿದಂತೆ ಮುನಮುಟಗಿ ಗ್ರಾಮದ ಹಿರಿಯರು. ಗಣ್ಯರು ನಾಗರಿಕರು ಹಾಜರಿದ್ದರು.