ಬೀದರ: ಜೂ.5:ಬೀದರ ತಾಲೂಕಿನ ಅಷ್ಟೂರ ಗ್ರಾಮದ ಹತ್ತಿರ ತೆಲಂಗಾಣಾ ಬಸ್ಸ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತವಾಗಿ ದ್ವಿಚಕ್ರವಾಹನದ ಇಬ್ಬರಿಗೂ ಗಂಭೀರವಾಗಿ ಗಾಯವಾಗಿತ್ತು ಇದನ್ನು ಕಂಡು ಹೆರಿಗೆಗೆ ತೆರಳುತ್ತಿದ್ದ 108 ಆರೋಗ್ಯ ಕವಚ ಅಂಬುಲೆನ್ಸ ಸಿಬ್ಬಂಧಿಗಳಾದ ಜಾರ್ಜ(ಇ ಎಂ ಟಿ) ಹಾಗೂ ಅಂಬುಲೆನ್ಸ್ ಡ್ರೈವರ್(PIಐಔಖಿ) ಪ್ರಕಾಶ ಹಳ್ಳಿ ಅವರು ಅಪಘಾತಕ್ಕಿಡಾದ ಭಿಮಣ್ಣಾ(60 ವರ್ಷ) ಹಾಗೂ ಸುನೀಲ(37ವರ್ಷ) ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಅವರ ಜೀವ ರಕ್ಷಿಸಲಾಯಿತು.
ಪ್ರಥಮ ಚಿಕಿತ್ಸೆ ನೀಡಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಅವರ ಜೀವ ರಕ್ಷಣೆ ಮಾಡಿದ 108 ಆರೋಗ್ಯ ಕವಚ ಅಂಬುಲೆನ್ಸ್ ಸಿಬ್ಬಂಧಿÀ ಜಾರ್ಜ (ಇ ಎಂ ಟಿ ) ಹಾಗೂ ಅಂಬುಲೆನ್ಸ್ ಡ್ರೈವರ್ ಪ್ರಕಾಶ ಹಳ್ಳಿ(PIಐಔಖಿ) ಅವರನ್ನು 108 ಆರೋಗ್ಯ ಕವಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಚಿಕ್ಲಿ(ಜೆ) ಅವರ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.