ಅಪಘಾತ:ಕೃಷಿ ಅಧಿಕಾರಿ ಸಾವು

ಚಿಂಚೋಳಿ,ನ.29-ತಾಲ್ಲೂಕಿನ ಫತ್ತೇಪುರ ಗ್ರಾಮದ ಬಳಿ ಭಾನುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಹಾಯಕ ಕೃಷಿ ಅಧಿಕಾರಿ, ಸಾಲೇಬೀರನಹಳ್ಳಿ ಗ್ರಾಮದ ಸೀರಾಜುದ್ದಿನ್ ಪಟೇಲ್ (54) ಮೃತಪಟ್ಟಿದ್ದಾರೆ.
ಭಾನುವಾರ ರಾತ್ರಿ ಚಿಂಚೋಳಿಯಿಂದ ಬೈಕ್‍ನಲ್ಲಿ ಸಾಲೇಬೀರನಹಳ್ಳಿಗೆ ಹೋಗುತ್ತಿದ್ದಾಗ ಫತ್ತೇಪುರ ಬಳಿ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸೀರಾಜುದ್ದಿನ್ ಅವರು, ಸುಧೀರ ನಾಟ್ಯಸಂಘ ಸ್ಥಾಪಿಸಿ ವಿವಿಧೆಡೆ ನಾಟಕ ಪ್ರದರ್ಶಿಸುತ್ತಿದ್ದರು. ಸರ್ಕಾರಿ ಸೇವೆ ಜೊತೆಗೆ ಸಾಹಿತ್ಯ, ರಂಗಭೂಮಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.