ಅನ್ಸಾರಿಯ ಎಜುಕೇಶನ್ ಸೆಂಟರ್ ವಾರ್ಷಿಕ ಮಹಾಸಭೆ

ಸುಳ್ಯ:ಅನ್ಸಾರಿಯ ಎಜುಕೇಶನ್ ಸೆಂಟರ್ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ ಸುಳ್ಯ ಇದರ ೨೫ ನೇ ವಾರ್ಷಿಕ ಮಹಾಸಭೆ ಶುಕ್ರವಾರ ಅನ್ಸಾರಿಯ ಸಭಾಂಗಣದಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ದುವಾಶಿರ್ವಚನ ನೀಡಿದರು. ಕಾರ್ಯಕ್ರಮವನ್ನು ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಉದ್ಘಾಟಿಸಿದರು. ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ.ಎಂ ಅಬ್ದುಲ್ ಮಜೀದ್ ಜನತಾ ಅಧ್ಯಕ್ಷತೆ ವಹಿಸಿದ್ದರು.ಅನ್ಸಾರಿಯ ಜುಮ್ಮಾ ಮಸೀದಿ ಖತೀಬರಾದ ಉಮ್ಮರ್ ಮುಸ್ಲಿಯಾರ್, ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಎಸ್ ಆದಂ ಕುಂಞಿ ಕಮ್ಮಾಡಿ, ಅನ್ಸಾರಿಯ ಸಲಹಾ ಸಮಿತಿ ಸದಸ್ಯರಾದ ಹಸನುಲ್ ಪೈಝಿ ಮಾಂಬ್ಳಿ,ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಹಾಜಿ ಅಬ್ದುಲ್ ಶುಕೂರ್,ಅನ್ಸಾರಿಯ ಯ ಎ ಇ ಸಮಿತಿ ಕೋಶಾಧಿಕಾರಿ ವಿ.ಕೆ ಮಹಮ್ಮದ್ ಮುನೀರ್ ಜಟ್ಟಿಪಳ್ಳ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಜಿ ಐ ಇಸ್ಮಾಯಿಲ್, ಎಜಿಸಿಸಿ ಹಾಜಿ ಎಸ್ ಎಂ ಅಬ್ದುಲ್ ಹಮೀದ್, ಸುನ್ನಿ ಮದರಸ ಮ್ಯಾನೇಜ್ಮೆಂಟ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ದ.ಕ ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಹಾಜಿ ಮುಸ್ತಫಾ ಕೆ.ಎಂ,ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಸಂಚಾಲಕ ಅಬ್ದುಲ್ಲಾ ಮಾಸ್ಟರ್ ಅರಂತೋಡು,ಅನ್ಸಾರಿಯ ಶಾದಿಮಹಲ್ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಪಟೇಲ್, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್,ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್, ನ.ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಮೊದಲಾದವರು ಉಪಸ್ಥಿತರಿದ್ದರು.
ಅನ್ಸಾರಿಯ ಎಜುಕೇಶನ್ ಸೆಂಟರ್‌ನ ವಿದ್ಯಾರ್ಥಿ ಮುಝಮೀಲ್ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಎಸ್ ಎಂ ಹನೀಫ್ ಬುಶ್ರಾ ಸ್ವಾಗತಿಸಿದರು.
ಕಾರ್ಯದರ್ಶಿ ಕೆ.ಎ ಅಬ್ದುಲ್ ಕಲಾಂ ಬೀಜಕೊಚ್ಚಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಲತೀಫ್ ಹರ್ಲಡ್ಕ ಲೆಕ್ಕಪತ್ರ ಮಂಡಿಸಿದರು. ಅನ್ಸಾರಿಯ ವ್ಯವಸ್ಥಾಪಕ ಶರೀಫ್ ಕಾರ್ಯಕ್ರಮ ನಿರೂಪಿಸಿದರು.