ಅನ್ಯ ಇಲಾಖೆ ಕೆಲಸ ನೀಡದಿರಲು ವಿಎಗಳ ಮನವಿ

ಮಾಲೂರು.ಏ.೪:ಕಂದಾಯ ಇಲಾಖೆಯ ನೌಕರರಿಗೆ ಅನ್ಯ ಇಲಾಖೆಯ ಕೆಲಸ ಕಾರ್ಯಗಳನ್ನು ವಹಿಸುತ್ತಿರುವುದು ಕೂಡಲೇ ಸ್ಥಗಿತಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗಳು ಕಂದಾಯ ಇಲಾಖೆ ಮಾಡಿರುವ ಆದೇಶವನ್ನು ಪಾಲನೆ ಮಾಡಿ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳ ಕಾಪಾಡುವಂತೆ ತಾಲೂಕು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಕಚೇರಿಯ ತಾಶೀಲ್ದಾರ್ ಸಭಾಂಗಣಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ ನಂತರ ಅಧ್ಯಕ್ಷ ಸಿ.ವಿ, ಮುನೇಶ್ ಮಾತನಾಡಿ ಮುಖ್ಯ ಕಾರ್ಯದರ್ಶಿಗಳು ಕಂದಾಯ ಇಲಾಖೆ ಈಗಾಗಲೇ ಇಲಾಖೆಯಿಂದ ಹೊರಡಿಸಲಾದ ಕೆಲಸಕಾರ್ಯಗಳನ್ನು ಹೆಚುತ್ತಿರುವ ಬಗ್ಗೆ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘವು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ.
ಮುಖ್ಯ ಕಾರ್ಯದರ್ಶಿಗಳು ಕಂದಾಯ ಇಲಾಖೆ ಅವರ ಪೂರ್ವಾನುಮತಿಯಿಲ್ಲದೆ ವಹಿಸುವ ಅನ್ಯ ಇಲಾಖೆಗಳ ಕೆಲಸಗಳನ್ನು ಕೂಡಲೆ ಸ್ಥಗಿತಗೊಳಿಸುವಂತೆ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳು ಅವರನ್ನು ನಿಯುಕ್ತಿಗೊಳಿಸಿದ ಸ್ಥಳದಿಂದ ವಿವಿಧ ಕಾರಣಗಳಿಂದ ಕಚೇರಿಗಳಿಗೆ ಅನ್ಯ ಕರ್ತವ್ಯದ ಮೇಲೆ ಯೋಚಿಸಬಾರದು ಅತ್ಯಗತ್ಯ ಸಂದರ್ಭಗಳನ್ನು ಹೊರತುಪಡಿಸಿ ರಜಾ ದಿನಗಳಲ್ಲಿ ಇಲಾಖೆಯ ಸಿಬ್ಬಂದಿಗೆ ಸರಕಾರಿ ಕೆಲಸ ವಹಿಸುವುದನ್ನು ನಿಲ್ಲಿಸುವಂತೆ ಇಲಾಖೆಯು ಹೊರಡಿಸಲಾದ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಆದೇಶಿಸಿರುತ್ತಾರೆ.
ಆದ್ದರಿಂದ ಕಂದಾಯ ಇಲಾಖೆಯ ಪೂರ್ವಾನುಮತಿ ಪಡೆಯದೆ ಜಾರಿಗೊಳಿಸುತ್ತಿರುವ ಕೆಲವು ಅನ್ಯ ಇಲಾಖೆಯ ಕೆಲಸವನ್ನು ಸ್ಥಗಿತಗೊಳಿಸಬೇಕು.
ಸಂಬಂಧಿಸಿದ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಒಂದು ಯೋಜನೆಯ ಕೆಲಸ ಪೂರ್ಣಗೊಂಡ ನಂತರ ಮತ್ತೊಂದು ಯೋಜನೆಯ ಕೆಲಸವನ್ನು ನಿರ್ವಹಿಸಲು ಕಾಲಾವಕಾಶ ನೀಡಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮಲೆಕ್ಕಾಧಿಕಾರಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಕರ್ತವ್ಯ ನಿರ್ವಹಿಸುವ ವಾತಾವರಣವನ್ನು ನಿರ್ಮಿಸಿ ಗ್ರಾಮಲೆಕ್ಕಾಧಿಕಾರಿಗಳ ಆರೋಗ್ಯ ಹಿತವನ್ನು ಕಾಪಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್, ಖಜಾಂಚಿ ನಾಗರಾಜ್, ಗೌರವಾಧ್ಯಕ್ಷ ಎಸ್.ಜಿ, ಮಂಜುನಾಥ್ ಸದಸ್ಯರಾದ ಅಮರ್‌ಶಂಕರ್, ವೆಂಕಟೇಶ್, ರಾಹುಲ್, ನಿತಿನ್, ನೂತನ್, ಚಿತ್ರ, ಮಧು, ಮೀನಾ, ಅನಿತಾ, ಸ್ವಾತಿ ಇನ್ನಿತರರು ಹಾಜರಿದ್ದರು.