ಅನ್ಯಾಯ ಪ್ರಶ್ನಿಸುವ ನೈತಿಕ ಹಕ್ಕು ಬೆಳೆಸಿಕೊಳ್ಳಿ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ, ನ 5: ನಾಡು, ನುಡಿ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದು ಹಿರಿಯ ಪತ್ರಕರ್ತ, ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಈಶ್ವರ ಹೋಟಿ ಹೇಳಿದರು.
ಪಟ್ಟಣದ ಚನ್ನಮ್ಮ ಸಮಾಧಿ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕøತಿಕ, ನಗೆ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಕನ್ನಡವನ್ನು ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ಹಲವು ಮೊದಲಗಳ ನಾಡು ಕರ್ನಾಟಕವಾಗಿದೆ. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕರ್ನಾಟಕಕ್ಕೆ ಲಭಿಸಿವೆ. ಕನ್ನಡ ಭಾಷೆಗೆ ಹೆಚ್ಚಿನ ಒತ್ತು ಸಿಗುತ್ತಿದೆ ಎಂದರು. ಕರವೇ ಕಾರ್ಯಕರ್ತರು ಅನಾಥಶ್ರಮ, ವೃದ್ಧಾಶ್ರಮ ಪ್ರಾರಂಭಿಸುತ್ತಿರುವುದು ನಿಜಕ್ಕೂ ಖುಷಿ ತರುವಂತ ವಿಚಾರವಾಗಿದೆ. ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಕನ್ನಡ ಉಳಿಸಿ, ಬೆಳೆಸುವಲ್ಲಿ ಬೈಲಹೊಂಗಲ ನಾಡಿನ ಸೇವೆ ಅಪಾರವಾಗಿದೆ. ಕನ್ನಡತನ ನಮ್ಮ ಅಸ್ಮಿತೆಯಾಗಿದೆ. ಈ ಬಾರಿ ಬೆಳಗಾವಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಜನ ಕನ್ನಡ ಹಬ್ಬವನ್ನು ಅದ್ದೂರಿಯಿಂದ ಆಚರಿಸಿರುವುದು ವಿಶೇಷವಾಗಿದೆ ಎಂದರು. ಇದೇ ವೇಳೆ ಕಾರ್ಯನಿರತ ಪತ್ರಕರ್ತರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ನಿರ್ದೇಶಕ ರಾಜು ಕುಡಸೋಮಣ್ಣವರ, ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ, ಬಿ.ಬಿ.ಗಣಾಚಾರಿ, ಕುಮಾರಗೌಡ ಪಾಟೀಲ, ಮುಸ್ಲಿಂ ಸಮಾಜದ ಮುಖಂಡ ಬಾಬುಸಾಬ ಸಂಗೊಳ್ಳಿ, ನ್ಯಾಯವಾದಿ ಎಫ್.ಎಸ್.ಸಿದ್ಧನಗೌಡರ, ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ, ಕರವೇ ರಾಜ್ಯ ರೈತ ಘಟಕ ಸಂಚಾಲಕ ಸುರೇಶ ಗವಣ್ಣವರ, ಜಿಲ್ಲಾ ಸಂಚಾಲಕ ಗಣೇಶ ರೋಖಡೆ, ತಜ್ಞ ಡಾ.ರವಿ ನಾಯ್ಕ, ಉದಯ ಚಿಕ್ಕಣ್ಣವರ ಅತಿಥಿಗಳಾಗಿ ಆಗಮಿಸಿದ್ದರು.
ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ತಾಲೂಕಾಧ್ಯಕ್ಷ ರಾಜು ಬೋಳಣ್ಣವರ, ಕಾರ್ಯಕರ್ತರಾದ ಶಿವಾನಂದ ಕರುಬೇಟ್, ಶಶಿಕುಮಾರ ಪಾಟೀಲ, ಮಲ್ಲಿಕಾರ್ಜುನ ಬಾಜಿ, ಫಕ್ರುಸಾಬ ಕುಸಲಾಪೂರ, ಸೋಯೇಬ ಸಂಗೊಳ್ಳಿ, ಅಭಿಷೇಕ ಕಲಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿದ್ಧಾರೂಢ ಹೊಂಡಪ್ಪನ್ನವರ ಸ್ವಾಗತಿಸಿದರು. ಸಂತೋಷ ಹುಣಶೀಕಟ್ಟಿ ನಿರೂಪಿಸಿದರು. ಪ್ರಕಾಶ ಕಂಠಿ ವಂದಿಸಿದರು.