
ಆಳಂದ ;ನ.10: ‘ವಿದ್ಯಾರ್ಥಿ/ನಿ ಯ ಮೇಲೆ ಅನ್ಯಾಯ,ದೌರ್ಜನ್ಯ ನಡೆದರೆ ನ್ಯಾಯಾಲಯದ ಗಮನಕ್ಕೆ ತಂದು,ಪರಿಹಾರ ಕಂಡುಕೊಳ್ಳಿ’ ಎಂದು ಆಳಂದ ಜೆಎಂಎಫ್‍ಸಿ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಾಲಾ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,’ಕರ್ತವ್ಯವನ್ನು ತಮ್ಮ ಜೀವನದಲ್ಲಿ ಮೈಗೂಡಿಸಿ,ಕಾನೂನಿನ ಮಾಹಿತಿ ಪಡೆಯಲು ಯಾರು ಕೂಡ ವಂಚಿತ ರಾಗಬಾರದು ಎಂದರು.
ವಕೀಲ ಎಂ.ವಿ. ಎಕಬೋಟೆ ಮಾತನಾಡಿ ಕಾನೂನು ಸೇವೆಗಳ ಕುರಿತು ಸಂಕ್ಷಿಪ್ತವಾಗಿ ಉಪನ್ಯಾಸ ನೀಡಿದರು.
ಮುಖ್ಯಶಿಕ್ಷಕ ಶ್ರೀಮಂತ ಹತ್ತರಕಿ ಮಾತನಾಡಿದರು.ಇದೇ ವೇಳೆಯಲ್ಲಿ ಕರ್ತವ್ಯದ ಕುರಿತು ಪ್ರತಿಜ್ಞೆಯನ್ನು ನ್ಯಾಯಾಧೀಶರು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪುರೆ,
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ನೇಹಾ ಪಾಟೀಲ,
ಸರ್ಕಾರಿ ಅಭಿಯೋಜಕಿ ಜ್ಯೋತಿ ಬಂದಿ, ಅಭಿಯೋಜಕ ಇಸ್ಮಾಯಿಲ್ ಪಟೇಲ್,ವಕೀಲರ ಸಂಘದ ಕಾರ್ಯದರ್ಶಿ ಬಲಭೀಮ ಸಿಂಧೆ,
ಪ್ರಭಾರಿ ಬಿ.ಇ.ಓ ಅರವಿಂದ ಬಾಸಗಿ,ಶಿಕ್ಷಕರಾದ
ಮಲ್ಲಿಕಾರ್ಜುನ ಖಜೂರಿ, ದಶರಥ ಕಠಾರೆ,ವಕೀಲಕರ ಸಂಘದ ಪದಾಧಿಕಾರಿಗಳು,ವಕೀಲರು,ಶಿಕ್ಷಕರು,ಪತ್ರಕರ್ತರು ವಿದ್ಯಾರ್ಥಿಗಳು ಮತ್ತಿತರರು ಇದ್ದರು.ವಕೀಲ ಸುಧೀರ ಪಡಶೇಟ್ಥಿ ನಿರೂಪಿಸಿದರು.ಸಂಗಣ್ಣ ಕರಮಂಗಿ ವಂದಿಸಿದರು.