ಅನ್ಯಾಯದ ವಿರುದ್ಧ ಒಗ್ಗಟ್ಟಿನ ಹೋರಾಟ: ದಶರಥ ದೊರೆ

(ಸಂಜೆವಾಣಿ ವಾರ್ತೆ)
ಸುರಪುರ:ನ.10: ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡುವ ಮೂಲಕ ನ್ಯಾಯದ ಪರ ಕೆಲಸ ಮಾಡೋಣ ಎಂದು ವಿಜಯ ಕರ್ನಾಟಕ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ದಶರಥ ದೋರೆ ಹೇಳಿದರು.
ನೂತನವಾಗಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಬಿ ಗ್ರಾಮದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಮಾಜದಲ್ಲಿ ಅನ್ಯಾಯಕ್ಕೋಳಗಾದ ರೈತರು, ಸಾರ್ವಜನಿಕರು, ದಲಿತರಪರ ಕೆಲಸ ಮಾಡೋಣ, ಹೆಸರಿಗೆ ಮಾತ್ರ ಸಂಘಟನೆ ಮಾಡಿಕೊಂಡು ತಿರುಗಾಟ ಮಾಡುವುದು ಬೇಡ ನಮ್ಮ ಸಂಘಟನೆಯು ದುರ್ಬಲರ ದ್ವನಿಯಾಗಿ ಕೆಲಸ ಮಾಡಲಿದೆ, ರಾಜ್ಯಾದ್ಯಂತ ಸಂಘಟನೆ ಉತ್ತಮ ಕೆಲಸ ಮಾಡುತ್ತಿದ್ದು ಜಿಲ್ಲೆಯಲ್ಲಿಯೂ ಸಹ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ತಿಳಿಸಿದರು.
ಎರಡೇ ದಿನಗಳಲ್ಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ: ಕಚಕನೂರು ಗ್ರಾಮ ಪಂಚಾಯಿತ ವ್ಯಾಪ್ತಿಯ ಬಾಚಿಮಟ್ಟಿ ಗ್ರಾಮದಲ್ಲಿ ಕೂಲಿಕಾರ್ಮಿಕರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಗಮನಕ್ಕೆ ಮೌಖಿಕವಾಗಿ ಲಿಖಿತವಾಗಿ ತಂದರು ಯಾವುದೇ ಪ್ರಯೋಜನೆಯಾಗಿರಲಿಲ್ಲ. ದಶರಥ ದೋರೆ ಅವರ ಗಮನಕ್ಕೆ ತಂದಾಗ ತಕ್ಷಣವೇ ಸ್ಪಂದಿಸಿ ಕಾರ್ಮಿಕರನ್ನು ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿದರು ಎಂದು ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಶ್ರೀಕಾಂತ್ ದೋರೆ ತಿಳಿಸಿದರು.
ಸಿದ್ದಾಪುರ ಬಿ ಗ್ರಾಮದ ಪರಶುರಾಮ ನೇತೃತ್ವದಲ್ಲಿ ಯುವಕರ ತಂಡ ನೂತನ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು.
ಸಂದರ್ಭದಲ್ಲಿ ಹಿರಿಯ ಮುಖಂಡರಾದ ಭೀಮನಗೌಡ ಮಾಲಿ ಪಾಟೀಲ, ಬಸವರಾಜ ಬಾಚಿಮಟ್ಟಿ, ಪರಶುರಾಮ ನಾಯಕ, ಶರಣಗೌಡ, ರಂಗನಗೌಡ, ರಾಮದೇವರು ಸೇರಿದಂತೆ ಅನೇಕರಿದ್ದರು.