ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ

ಚಿದಾನಂದ ದೊರೆ
ಯುವಕರಿಗೆ ವಿರಹ ಗೀತೆಯಾದ ಮಹಾದೇವ ಸ್ವಾಮಿ ಜಾನಪದ ಹಾಡು
ಸಿಂಧನೂರು. ಜೂ.೨೬ ಫೇಸ್ ಬುಕ್, ವಾಟ್ಸ್ ಆಪ್ ಟ್ವಿಟ್ಟರ್ ದಂಥಹ ಸಾಮಾಜಿಕ ಜಾಲತಾಣಗಳಲ್ಲಿ ಬೀಜಿಯಾಗಿ ಜಾನಪದ ಹಾಡು, ಸಾಹಿತ್ಯದ ಕಡೆಗೆ ತಲೆ
ಹಾಕದ ಯುವಕ ಯುವತಿಯರು ಮಳವಳ್ಳಿಯ ಡಾ, ಮಹಾದೇವ ಸ್ವಾಮಿ ಹಾಡಿರುವ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ ಎಂಬ ಜಾನಪದ ಹಾಡಿಗೆ ಯುವಕರು ಪುಲ್ ಪೀದಾ ಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಡು ಹಾಡಿ ಕುಣಿದು ಕುಪ್ಪಳಿಸಿದ್ದು ಪುಲ್ ವೈರಲ್ ಯಾಗಿದೆ
ಮಂಡ್ಯ ಜಿಲ್ಲೆಯ ಮಳವಳ್ಳಿಯ ಜಾನಪದ ಹಾಡುಗಾರ ಮಹಾದೇವ ಸ್ವಾಮಿ ೧೯೯೫ ರಲ್ಲಿ ಹಾಡಿದ ಹಾಡು ೨೮ ವರ್ಷಗಳ ಬಳಿಕ ಈಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಯಾಗಿದ್ದನ್ನು ನಾವು ನೀವೆಲ್ಲರು ನೋಡಬಹುದು.
ಮಹಾ ಬಾರತದ ಪಾಂಡವರಾದ ಅರ್ಜುನನು ಮಣಿಪುರದ ನಾಗರಾಜನ ಮಕ್ಕಳಾದ ಚಿತ್ರ ಕುಸುಮಾಲೆಯರನ್ನು ಮದುವೆಯಾಗಿ ಮಡದಿಯರನ್ನು ಮಣಿಪುರದಲ್ಲಿ ಬಿಟ್ಟು ಶ್ರೀಕೃಷ್ಣನ ತಂಗಿ ದ್ರೌಪದಿಯನ್ನು ಮದುವೆಯಾಗಿ ಆಸ್ತಿನಾ ಪುರದಲ್ಲಿ ವಾಸ ಮಾಡುತ್ತಾನೆ ೧೨ ವರ್ಷವಾದರು ರಾಯರು ಬರಲಿಲ್ಲ ಎಂದು ಚಿತ್ರ ಕುಸುಮಾಲೆಯರು ಅರ್ಜುನನ ಬಾವ ರೂಪವನ್ನು ಯಾರು ಚೆನ್ನಾಗಿ ಚಿತ್ರ ಲಿಪಿಗಾರರು ಬರೆದುಕೊಡುತ್ತಾರೊ ಅವರಿಗೆ ನಮ್ಮ ರಾಜ್ಯದ ಚಿನ್ನ, ವಜ್ರ, ಮುತ್ತುಗಳನ್ನು ಕೊಡುವದಾಗಿ ಎಲ್ಲಾ ದೇಶಗಳಲ್ಲಿ ಡಂಗೂರ ಸಾರಲಾಯಿತು
ಅಸ್ತಿನಾ ಪುರದಲ್ಲಿ ಡಂಗೂರ ಸಾರಿದ ಸುದ್ದಿ ಕೇಳಿದ ಅರ್ಜನನು ಯಾಕೆ ಡಂಗೂರ ಹಾಕುತ್ತಾರೆ ಕೇಳಿಕೊಂಡು ಬನ್ನಿ ಎಂದು ತನ್ನ ದಾಸಿಯರನ್ನು ಕಳಿಸಿದಾಗ ವಿಷಯ ಗೊತ್ತಾಗಿ ಚಿಂತೆ ಮಾಡುತ್ತ ದುಃಖ ದಲ್ಲಿ ಮಲಗಿರುತ್ತಾನೆ ಆಗ ದ್ರೌಪದಿ ಬಂದು ಯಾಕೆ ಚಿಂತೆಯಲ್ಲಿ ಇದ್ದಾರಾ ಎಂದಾಗ ಅರ್ಜನ ಇದ್ದ ವಿಷಯ ಹೇಳಿದಾಗ ಗಂಡ ನೆಂಬ ಬಯವಿಲ್ಲದೆ ಡಂಗೂರ ಸಾರಿದ ಬಂಡೆಯರ ಮನೆಗೆ ಹೆಂಡತಿ ನಾನಿರುವಾಗ ಅದೇಗೆ ನೀವು ಹೊಗಿದ್ಧೀರಿ ರಾಯರೆ ಎಂದಾಗ ಇಬ್ಬರ ಮದ್ಯ ಜಗಳ ನಡೆಯುತ್ತದೆ.
ನಾವಿಬ್ಬರೂ ಜಗಳ ಆಡದೆ ಪಗಡೆ ಆಟ ಆಡೋಣ ನಾನು ಸೋತರೆ ನಿನ್ನ ಮಡದಿಯರ ದಾಸಿಯಾಗಿ ೧೨ ವರ್ಷ ಸೇವೆ ಮಾಡುವೆ ನೀವು ಸೋತರೆ೧೨ ವರ್ಷಧ ತನಕ ಸನ್ಯಾಸಿ ಯಾಗಿ ಬೀಕ್ಷೆ ಬೇಡುತು ದೇಶ ಸುತ್ತಬೇಕು ಎಂದು ಒಪ್ಪಂದ ವಾಗಿ ಪಗಡೆಯಾಟದಲ್ಲಿ ಅರ್ಜನು ಸೋತು ಕೊಟ್ಟ ಮಾತಿನಂತೆ ಅರ್ಜನನು ರಾಜ್ಯ ಬೀದಿಯಲ್ಲಿ ಸನ್ಯಾಸಿ ಯಾಗಿ ಬೀಕ್ಷೆ ಬೇಡುತ್ತೀರುವಾಗ ಆಗ ವೈಶ್ಯರು ರಾಜ್ಯನ್ನು ಕಂಡು ಈ ಹಾಡನ್ನು ಹಾಡಿದರು ಪೌರಾಣಿಕ ಹಾಡನ್ನು ಮಾಹಾದೇವ ಸ್ವಾಮಿ ಜಾನಪದ ಕಾವ್ಯದ ಮೂಲಕ ಹಾಡಿದ್ದಾರೆ ಇದೆ ಹಾಡು ಈಗ ಎಲ್ಲಾ ಕಡೆ ಬಾರಿ ಸುದ್ದಿ ಮಾಡತೋಡಗಿದೆ.
ಜಾನಪದ ಕಾವ್ಯದ ತುಣಕಾದ ಈ ಹಾಡು ಈಗ ಸಿಕ್ಕಾ ಪಟ್ಟಿ ವೈರಲ್ ಯಾಗಿದೆ ಜಾನಪದ ಗೀತೆಗೆ ಮಳವಳ್ಳಿಯ ಮಹಾದೇವ ಸ್ವಾಮಿ ಜೀವ ತುಂಬಿದ್ದಾರೆ ಅರ್ಜುನನು ಜೋಗಿಯಾದ ಹಾಡು ಈಗ ಮದುವೆ ಯಾಗಲಾರದ ಯುವಕರಿಗೆ ವಿರಹ ಗೀತೆ ಯಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಯುವಕ ಯುವತಿಯರು ಹಾಡನ್ನು ಹಾಡಿ ಸಂಭ್ರಮಿಸುತ್ತಿದ್ದಾರೆ.
ಹಾಡು ಹಾಡಿದ ಮಹಾದೇವ ಸ್ವಾಮಿ ಮೇಲೆ ಕೆಲವರು ಅವರ ಮೇಲೆ ಹಲ್ಲೆಯನ್ನು ಸಹ ಮಾಡಿದ್ದಾರೆ ಹಿಂದಿ ಸೇರಿದಂತೆ ಹಲವಾರು ಬಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದು ಇವರಿಗೆ ಡಾಕ್ಟರೇಟ್ ಪದವಿ ಸಹ ಬಂದಿದೆ ಡಾ.ಮಹಾದೇವ ಸ್ವಾಮಿ ಗೆ ಸಿನಿಮಾಗಳಲ್ಲಿ ಹಾಡುವಂತೆ ಚಿತ್ರ ನಿರ್ದೇಶಕರು ನಿರ್ಮಾಪಕರು ಕರೆ ಮಾಡಿ ಕರೆದಿದ್ದು ಮಹಾದೇವ ಸ್ವಾಮಿ ಎತ್ತರಕ್ಕೆ ಬೆಳೆದು ನಾಡಿನ ಹೆಸರಾಂತ ಹಾಡು ಗಾರ ಆಗಲಿ ಎನ್ನುವದೆ ಪತ್ರಿಯ ಆಸೆಯವಾಗಿದೆ.