ಅನ್ಯಭಾಗ್ಯ ಯೋಜನೆ ಅರ್ಹರಿಗೆ ತಲುಪಲಿ: ತೆಗನೂರ

ಕಲಬುರಗಿ:ಮೇ.27: ಅನ್ನಭಾಗ್ಯ ಯೋಜನೆ ಅರ್ಹರಿಗೆ ಮಾತ್ರ ತಲುಪಬೇಕು, ಕಳ್ಳ ಸಂತೆಯ ಮಾರಾಟದ ದಂಧೆ ನಿಲ್ಲಬೇಕು ಎಂದು ಕನ್ನಡಪರ ಹೋರಾಟಗಾರ ಆನಂದ ತೆಗನೂರ ಒತ್ತಾಯಿಸಿದ್ದಾರೆ.ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯು ತುಂಬಾ ಶ್ರೇಷ್ಠವಾದ ಯೋಜನೆ.ಹಸಿದ ಹೊಟ್ಟೆಗೆ ಅನ್ನ ನೀಡುವ ಭಾಗ್ಯ ಅತ್ಯಮೂಲವಾದುದು.ಕೋಟ್ಯಾಂತರ ಜನ,ನಿರ್ಗತಿಕರಿಗೆ ಬಡ ಕುಟುಂಬಕ್ಕೆ ಈ ಯೋಜನೆ ಒಂದು ದೊಡ್ಡ ಯೋಜನೆ.ಅನ್ನಭಾಗ್ಯ ಯೋಜನೆಯಿಂದ ಭೀಕ್ಷಕರು ಸಹ ಕಡಿಮೆಯಾಗುತ್ತಿದ್ದಾರೆ.ಈ ಯೋಜನೆ ಅರ್ಹರಿಗೆ ಮಾತ್ರ ತಲುಪಲಿ, ಉಳ್ಳವರ ಪಾಲಾಗಬಾರದು ಎಂದರು. ಕೆಲವೆಡೆ ತುಂಬಾ ಅನುಕೂಲವಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿರುತ್ತಾರೆ.ಉದ್ದೇಶ ಇಷ್ಟೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವೈದ್ಯಕೀಯ ಖರ್ಚು ಉಳಿಸುವುದಕ್ಕಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲಿಕ್ಕಾಗಿ ಬಹುತೇಕ ಕುಟುಂಬಗಳು ಬಿಪಿಎಲ್ ಕಾರ್ಡ ಪಡೆದಿರುತ್ತಾರೆ.ಇದಕ್ಕೆ ಒಂದು ಹೊಸ ಯೋಜನೆಯನ್ನು ಸರ್ಕಾರ ತರಬೇಕಾಗಿದೆ ಎಂದು ಸಲಹೆ ನೀಡಿದರು.ಸಾಕಷ್ಟು ಅನುಕೂಲ ಇರುವ ಕುಟುಂಬಗಳಿಗೆ ಅನ್ನಭಾಗ್ಯದ ಯೋಜನೆ ಬೇಕಿರುವುದಿಲ್ಲ.ಈ ಕುಟುಂಬಗಳು ನ್ಯಾಯಬೆಲೆ ಅಂಗಡಿ ಮತ್ತು ಸಹಕಾರ ಸಂಘಗಳಿಂದ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಅಕ್ಕಿಯನ್ನು ಕಾಳಸಂತೆಯ ವ್ಯಾಪಾರಸ್ಥರಿಗೆ ಮಾರುತ್ತಿದ್ದಾರೆ. ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅನ್ನಭಾಗ್ಯ ಯೋಜನೆ ಕೊಡುವುದು ತುಂಬಾ ಸೂಕ್ತ. ಇನ್ನೂ ಕೆಲವು ಕುಟುಂಬಗಳು ಗಂಡಂದಿರ ದುಶ್ಚಟದಿಂದ ಬರುವ ಅಕ್ಕಿಯನ್ನು ಮಾರುತ್ತಿದ್ದಾರೆ.ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟವಾಗುವ ದಂಧೆ ಮೊದಲು ನಿಲ್ಲಿಸಬೇಕು.ಎಂದು ಆಗ್ರಹಿಸಿದರು.ಇದು ಸಾರ್ವಜನಿಕರ ತೆರಿಗೆ ಹಣ,ಸರ್ಕಾರ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಯ ಆದೇಶ ಹೊರಡಿಸಬೇಕು.ಮಾರಾಟ ಮಾಡುವರನ್ನು ಜತೆಗೆ ತೆಗೆದುಕೊಳ್ಳುವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು.ಆಗ ಮಾತ್ರ ನಿಮ್ಮ ಯೋಜನೆಗೆ ಒಂದು ಅರ್ಥ ಬರುತ್ತದೆ ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.