ಅನ್ನ ಭಾಗ್ಯ ಯೋಜನೆ ಅಡಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಬೀದರ: ಜೂ.21:ಕರ್ನಾಟಕ ರಾಜ್ಯ ಸರ್ಕಾರವು ಬಡವರಿಗೆ ಅನುಕೂಲವಾಗಿ ಹೆಚ್ಚುವರಿ ಅಕ್ಕಿ ನೀಡಲು ನಿರ್ಧರಿಸಿರುತ್ತದೆ. ಕರ್ನಾಟಕ ರಾಜ್ಯದ ಬಡ ಜನರಿಗೆ ಹೆಚ್ಚುವರಿಯಾಗಿ ಅಕ್ಕಿ ಒದಗಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುತ್ತದೆ. ಆದರೆ ರಾಜ್ಯದಲ್ಲಿ ಮತದಾರರು ಭಾ.ಜ.ಪ. ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಜನ ವಿರೋಧಿ ನೀತಿಗಳನ್ನು ಕಡೆಗಣಿಸಿ ಇಂದು ರಾಜ್ಯದಲ್ಲಿ ಮತದಾರರು ಕಾಂಗ್ರೇಸ್ ಸರ್ಕಾರವನ್ನು ಬಹುಮತದಿಂದ ಆಯ್ಕೆ ಮಾಡಿಕೊಟ್ಟಿರುತ್ತದೆ.
ರಾಜ್ಯದಲ್ಲಿ ಬಡ ಜನರಿಗೆ ಹೆಚ್ಚುವರಿಯಾಗಿ ಪ್ರತಿ ಜನರಿಗೆ 10 ಕೆ.ಜಿ. ಅಕ್ಕಿ ನೀಡಲು ನಿರ್ಧರಿಸಿದ್ದು, ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕೋರಿರುತ್ತದೆ. ಆದರೆ ಕೇಂದ್ರ ಸರ್ಕಾರವು ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ್ದರಿಂದ ಬೀದರ ಜಿಲ್ಲಾ ಕಾಂಗ್ರೇಸ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುತ್ತದೆ.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ ಜಾಬಶಟ್ಟಿ ರವರು ಮಾತನಾಡುತ್ತ ಕೇಂದ್ರ ಸರ್ಕಾರವು ಬಡವರ ವಿರೋಧಿ ಸರ್ಕಾರವಾಗಿದ್ದು ಬಡ ಜನರಿಗೆ ಅಕ್ಕಿ ನೀಡುವಲ್ಲಿ ನಿರಾಕರಿಸಿರುವುದು ಕೇಂದ್ರ ಸರ್ಕಾರ ಬಡಜನರ ವಿರೋಧಿ ಸರ್ಕಾರವಾಗಿರುತ್ತದೆ ಎಂದು ತಿಳಿಸಿದರು.
ಶ್ರೀ ನರಸಿಂಗರಾವ ಸೂರ್ಯವಂಶಿ ಮಾಜಿ ಸಂಸದರು ಮಾತನಾಡುತ್ತ, ರಾಜಕೀಯ ಶತ್ರುತ್ವವನ್ನು ಬದಗಿಟ್ಟು ಬಡ ಜನರಿಗೆ ಅನ್ನ ನೀಡುವ ಕಾರ್ಯ ಕೇಂದ್ರ ಸರ್ಕಾರ ಮಾಡಬೇಕೆಂದು ಸಲಹೆ ನೀಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಸಮಿ., ಪರವೇಜ ಕಮಾಲ ಮತ್ತು ವಿನೋದ ಅಪ್ಪೆ, ಎಂ.ವೈ. ಪಾಟೀಲ, ಜಿಲ್ಲಾ ವಕ್ತಾರರಾದ ಜಾರ್ಜ ಫರ್ನಾಂಡಿಸ್, ಕಾರ್ಯದರ್ಶಿಗಳಾದ ಸುನೀಲ ಬಚ್ಚನ, ಬಸವರಾಜ ಭತಮೂರ್ಗೆ, ನಯೀಮ ಕೀರ್ಮಾನಿ, ಮಿಜಬಾ, ನಾಗನಾಥ ಪಟೇಲ, ಚನ್ನಪ್ಪಾ ಉಪ್ಪೆ, ಜಿಲ್ಲಾ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಪೂಜಾ ಜಾರ್ಜ, ಜಿಲ್ಲಾ ಕಾಂಗ್ರೇಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಡಿ.ಕೆ. ಸಂಜು, ಮುಂಚೋಣಿ ಘಟಕಗಳ ಅಧ್ಯಕ್ಷರುಗಳಾದ ಗೋವರ್ಧನ ರಾಠೋಡ, ಜಾನ ವೆಸ್ಲಿ, ಸನ್ಮುಖಪ್ಪಾ ಪಸಾರ್ಗೆ, ಬ್ಲಾಕ್ ಅಧ್ಯಕ್ಷರುಗಳಾದ ಅಫಸರ ಸಾಬ ಹುಮನಾಬಾದ, ಚಂದ್ರಶೇಖರ ಚನ್ನಶೆಟ್ಟಿ ಬೀದರ (ದಕ್ಷಿಣ), ರಾಜಕುಮಾರ ಹಲಬರ್ಗಾ ಔರಾದ, ಹನುಮಂತ ಚೌಹಾನ, ಭಾಲ್ಕಿ (ಗ್ರಾಮೀಣ), ನಸೀರ ಅಹ್ಮದ ಸಾಬ ಭಾಲ್ಕಿ (ಪಟ್ಟಣ) ಹಾಗೂ ಪಕ್ಷದ ಹಿರಿಯ ಮುಖಂಡರುಗಳಾದ ಕೇಶವ ಮಹಾರಾಜ, ಬಾಬು ಹೊನ್ನಾ ನಾಯಕ, ಸತ್ತಾರ ಮಂದಕನಳ್ಳಿ, ಇರ್ಶಾದ ಪಹಲವಾನ, ಮಾರುತಿರಾವ ಶಾಖಾ, ಪ್ರಶಾಂತ ಕೊಟಗಿರಾ ಭಾಲ್ಕಿ, ಜೈಪಾಲ ಬೋರಾಳೆ ಅಧ್ಯಕ್ಷರು ಯುವ ಕಾಂಗ್ರೇಸ ಭಾಲ್ಕಿ, ನಗರ ಸಭೆ ಸದಸ್ಯರುಗಳಾದ ಪ್ರಶಾಂತ ದೊಡ್ಡಿ, ಮೊಹನ ಕಾಳೇಕರ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.