ಅನ್ನ ನೀಡುವ ರೈತ ಸದೃಢನಾದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ : ಶಂಕರಲಿಂಗ ಶಿವಾಚಾರ್ಯ

ಔರಾದ : ಡಿ.30:ದೇಶಕ್ಕೆ ಅನ್ನ ನೀಡುವ ರೈತ, ದೇಶಕ್ಕೆ ರಕ್ಷಣೆ ನೀಡುವ ಯೋಧರು, ಮಕ್ಕಳಿಗೆ ಶಿಕ್ಷಣ ನೀಡುವ ಈ ಮೂವರು ಸದೃಢರಾದರೇ ಮಾತ್ರ ದೇಶ ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಮುಂದೆ ಗುರು, ಹಿಂದೇ ಗುರಿಯಿದ್ದರೇ ಮಾತ್ರ ರೈತನು ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಮಹಾರಾಷ್ಟ್ರ ರಾಜ್ಯದ ಹಣೆಗಾಂವ ಮಠದ ಪೂಜ್ಯ ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ದಿ. ಧಿರುಭಾಯಿ ಅಂಬಾನಿಯರ ಜನ್ಮನಿಮಿತ್ಯ ಶುಕ್ರವಾರ ತಾಲೂಕಿನ ಹಿಪ್ಪಳಗಾಂವ್ ದಲ್ಲಿ ರಿಲಯನ್ಸ್ ಫೌಂಡೇಷನ್, ಔಟ್ ರೀಚ್, ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಜರುಗಿದ 11ನೇ ರೈತ ಸಮ್ಮೇಳನದಲ್ಲಿ ಧೀರುಭಾಯಿ ಅಂಬಾನಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತುಳಸಿಗಿಡಕ್ಕೆ ನಿರೇರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಇಲ್ಲಿನ ರೈತನು ಅನೇಕ ಕಷ್ಟ ಕಾರ್ಪಣ್ಯಗಳ ಮಧ್ಯದಲ್ಲಿ ಇಂದಿನ ದಿನದಲ್ಲಿ ಕೃಷಿ ಮಾಡುತ್ತಿದ್ದಾರೆ. ರೈತರು ಆಧುನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು , ಮಣ್ಣಿನ ಫಲವತ್ತತೆಯನ್ನು ಆಪಾಡಿಕೊಂಡು ಕೃಷಿ ಮಾಡಿದರೇ ಉತ್ತಮ ಇಳುವರಿಯೊಂದಿಗೆ ಒಳ್ಳೆಯ ಆದಾಯ ನೀರೀಕ್ಷೆ ಮಾಡಬಹುದು. ಹವಾಮಾನದ ಕುರಿತು ಮಾಹಿತಿಗಳನ್ನುಅರಿತು ಕೃಷಿ ಮಾಡಬೇಕು. ಭೂಮಿಗೆ ರಾಸಾಯನಿಕ ಗೊಬ್ಬರ ಬಳಸದೇ ಸಾವಯವ ಹಾಗು ತಿಪ್ಪೆ ಗೊಬ್ಬರ ಬಳಸಿದರೇ , ಉತ್ತಮ ಇಳುವರಿ ಬರುತ್ತದೆ. ಅದನ್ನು ಊಟ ಮಾಡುವ ನಮಗೆ ಕೂಡಾ ಉತ್ತಮ ಆರೋಗ್ಯ ದೊರೆಯುತ್ತದೆ . ರಿಲಯನ್ಸ್ ಫೌಂಡೇಷನ್ 2012ರಿಂದ ಬೀದರ್ ಜಿಲ್ಲೆಯಲ್ಲಿ ಮುಂದೆ ಗುರು ಹಿಂದೆ ಗುರಿ ಅನ್ನುವ ಹಾಗೆ ರೈತರ ಸವಾರ್ಂಗೀಣ ಅಭಿವೃಧ್ಧಿಗೆ ಶ್ರಮಿಸಿ , ರೈತರ ಹಿತಕಾಪಾಡುತ್ತಿದೆ ಎಂದರು.

ಇದಕ್ಕೂ ಮುನ್ನ ಗ್ರಾಮದ ಹನುಮಾನ ಮಂದಿರದಿಂದ ವೈಭವಪೆÇೀತ ಎತ್ತಿನ ಗಾಡಿಯಲ್ಲಿ ಜರುಗಿದ ರೈತರ ಭವ್ಯ ಮೇರವಣಿಗೆಯೂ ಸರಕಾರಿ ಶಾಲೆಯ ಮಕ್ಕಳ ಕೋಲಾಟ , ಲೇಜೀಂ, ಮತ್ತು ಮಹಿಳೆಯರ ಪಾಂಡುರಂಗ ವಿಠ್ಠಲ ಭಜನೆ ಪದಗಳ ಹಾಡುವ ಮೂಲಕ ವೇದಿಕೆಗೆ ಬಂದು ಸೇರಿತು.

ಹಿರಿಯ ನಿವೃತ ಕೆವಿಕೆ ಮುಖ್ಯಸ್ಥ ಡಾ. ರವಿ ದೇಶಮುಖ ಮಾತನಾಡಿ, ಮೊದಲಿಗೊಂತ ಇವಾಗ ಕೃಷಿಯ ಬಗ್ಗೆ ಅನೇಕ ಯುವಕರು ಗಮನ ಸೆಳೆಯುತ್ತಿದ್ದಾರೆ. ಇಂತಹ ಯುವ ಜನತೆಗೆ ಸರ್ಕಾರ ಮತ್ತು ಇಲಾಖೆಗಳು ಮತ್ತು ಸರ್ಕಾರದಿಂದ ಹಲವಾರು ಅನುಭವ ಮತ್ತು ಯೋಜನೆಗಳ ನೆರವಾದರೇ ಇನ್ನು ಉತ್ತಮ ರೀತಿಯಿಂದ ಯುವ ಜನತೆ ಕೃಷಿಯ ಕಡೆಗೆ ತನ್ನ ಒಲವನ್ನು ತೋರುತ್ತಾರೆ. ಇಂತಹ ಕೆಲಸಕ್ಕೆ ಈಗಾಗಲೇ ರಿಲಯನ್ಸ್ ಫೌಂಡೇಷನ್ ದಶಕಗಳದಿಂದ ಉತ್ತಮಕ ಕಾರ್ಯ ಮಾಡುತ್ತಿದೆ. ಹಳೆ ಪದ್ದತಿಗಳನ್ನು ಬಿಟ್ಟು ಹೊಸ ಪದ್ದತಿಯ ಕೃಷಿಗೆ ಮಾರ್ಪಾಡಾದರೇ ರೈತರು ಹೆಚ್ಚಿನ ಆದಾಯ ಪಡೆಯಬಹುದು. ಕೃಷಿಗೆ ಬೇಕಾದ ಸುಧಾರಿತ ಬೀಜಗಳು, ಮೋಳಕೆ ಪ್ರಮಾಣ, ಬೀಜೋಪಚಾರ, ಸುಧಾರಿತ ಬಿತ್ತನೆ, ಕಟಾವು, ಮಾರಾಟ ಸೇರಿದಂತೆ ಪ್ರತಿಯೊಂದು ವಿಷಯಗಳ ಬಗ್ಗೆ ರೈತರು ಅನುಭವ ಪಡೆದರೇ ಮಾತ್ರ ಅವರು ಉತ್ತಮ ರೈತರಾಗಿ ಹೊರಹೊಮ್ಮಲು ಸಾಧ್ಯವಿದೆ. ಸ್ವಲ್ಪ ಹೋಲವಿದ್ದರೂ ಸಹ ಯುವ ಜನತೆ ವಲಸೆ ಹೋಗದೇ ತನ್ನೂರಿನಲ್ಲಿಯೇ ಇದ್ದುಕೊಂಡು ಉತ್ತಮ ಕೃಷಿಯೊಂದಿಗೆ ಬದುಕು ಸಾಗಿಸಬಹುದೆಂದರು.

ರಿಲಯನ್ಸ್ ಫೌಂಡೇಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಮಚಂದ್ರ ಶೇರಿಕಾರ್, ಕೃಷಿ ಸಂಶೋಧನಾ ಕೇಂದ್ರ ಬೀದರ್ ಹಿರಿಯ ವಿಜ್ಞಾನಿ ಡಾ. ಆರ್ ಎಲ್ ಜಾಧವ್, ತಾಪಂ ಇಒ ಮಾಣಿಕರಾವ ಪಾಟೀಲ್, ತಾಪಂ ಎಡಿ ಶಿವಕುಮಾರ್ ಘಾಟೆ, ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾಳಿ ಸೇರಿದಂತೆ ಇನ್ನಿತರರು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾಬಾಯಿ, ಪಿಡಿಒ ಶ್ರೀನಿವಾಸ್ ದೇಶಪಾಂಡೆ, ಅರವಿಂದ ಮೇತ್ರೆ, ಸಂಗಪ್ಪ ಅತಿವಾಳೆ, ಕವಿತಾ, ಮುಖ್ಯಗುರು ವೆಂಕಟರಾವ್ ನೇಳಗೆ, ಸಂಗಣ್ಣ ಹೂಗಾರ್, ಸಂಜು ಪಾಟೀಲ್, ಮಂಜುನ್ನಾಥ ಡೋಣಗಾಪೂರೆ, ಮಾರುತಿ, ಸಚೀನ್ ಪಾಟೀಲ್, ಮಹೇಶ , ಮಹಾದೇವ್, ಅಂಗದ್ ಸಿಂಗಡೆ, ಪಂಡರಿ ಬಿರಾದರ್, ಸುನೀಲ್ ಪಾಟೀಲ್, ಶಿವಾಜಿ ಪಾಟೀಲ್,ಸಂತೋಷ ಚಾಂಢೇಶ್ವರೇ, ಮಲ್ಲಪ್ಪ ಗೌಡಾ, ಮನ್ಮಥ ಹೊಂಡಾಳೆ, ಶ್ಯಾಮರಾವ್ ಇದ್ದರು. ಕೃಷ್ಣ ವೈಟಿ ವಂದಿಸಿದರು. ಮಧುಕರ್ ನಿರೂಪಣೆ ಮಾಡಿದರು.


ರೈತ ಸಮ್ಮೇಳನದಲ್ಲಿ ಗಮನ ಸೆಳೆದ ಸಾಂಸ್ಕøತಿಕ ಕಾರ್ಯಕ್ರಮ

ದಿ. ಧಿರುಭಾಯಿ ಅಂಬಾನಿಯರ ಜನ್ಮನಿಮಿತ್ಯ ಶುಕ್ರವಾರ ತಾಲೂಕಿನ ಹಿಪ್ಪಳಗಾಂವ್ ದಲ್ಲಿ ರಿಲಯನ್ಸ್ ಫೌಂಡೇಷನ್, ಔಟ್ ರೀಚ್, ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಜರುಗಿದ 11ನೇ ರೈತ ಸಮ್ಮೇಳನದಲ್ಲಿ ಸರ್ಕಾರಿ ಶಾಲೆಯ ಸೋನಾಕ್ಷಿ, ರೋಷನ್, ಸ್ವಾತಿ, ಸೌಮ್ಯ ರಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಮೈನವರೇಳಿಸಿದವು.


ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ

ಕೃಷಿಯಲ್ಲಿ ಅವಿರತ ಸಾಧನೆ ಮಾಡಿದ ರೇಣುಕಾ, ಚಂದ್ರಕಲಾ, ವಿದ್ಯಾವತಿ, ಬ್ರದಾವತಿ, ರಾಜೇಶ್ರೀ ನಾರಾಯಣಪುರ, ಕೊಟಗ್ಯಾಳ ಚಂದ್ರಕಲಾ ಸೇರಿದಂತೆ ಒಟ್ಟು 6 ಜನ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.