ಅನ್ನ ದಾಸೋಹವೇ ಶ್ರೇಷ್ಠ ದಾಸೋಹ ರಾಜ ಅಮರೇಶ್ವರ ನಾಯಕ್

ರಾಯಚೂರು, ಮೇ.೩೦- ಸತತ ೧೧ದಿನಗಳ ವರೆಗೆ ಓಂ ಸಾಯಿ ಧ್ಯಾನ ಮಂದಿರದ ಸಾಯಿ ಕಿಚನ್ ವತಿಯಿಂದ ದಿನದ ೩ ಒತ್ತು ಉಪಹಾರ ಮತ್ತು ಊಟವನ್ನು ರಾಯಚೂರು ನಗರದ ಎಲ್ಲಾ ಅಸ್ಪತ್ರೆಗಳಲ್ಲಿ ಇರುವ ಕೋರೋನಾ ಸೊಂಕಿತರಿಗೆ, ಹಾಗೂ ಅವರ ಸಹಾಯಕರಿಗೆ ಮತ್ತು ನಿರ್ಗತಿಕರಿಗೆ, ಕೋರೋನ ವಾರಿಯರ್ಸ್ ಗೆ ದಿನಾಂಕ ೨೦-೦೫-೨೦೨೦ ರಿಂದ ಪ್ರಾರಂಭವಾದ ಈ ದಾಸೋಹದ ಕಾರ್ಯ ಪ್ರತಿ ದಿನವೂ ಲಾಕ್ ಡೌನ್ ಮುಗಿಯುವವರೆಗೆ ಪ್ರತಿ ಒಬ್ಬರ ಹಸಿವ ನೀಗೀಸುವ ಮಾನವೀಯ ಕಾಯಕವನ್ನ ಮಾಡುತ್ತಾ ಬಂದಿದ್ದು ಈ ಕಾರ್ಯವನ್ನು ನೋಡಿ, ಇಂದು ಸಾಯಿ ಮಂದಿರಕ್ಕೆ ಬೇಟಿ ನಿಡೀದ ರಾಜ ಅಮರೇಶ್ ನಾಯಕ್ ಸಂಸದರು ಅವರು ಸಾಯಿ ಮಂದಿರವು ಮಾಡುತ್ತಿರುವ ಈ ಮಾನವೀಯ ದಾಸೋಹ ಕುರಿತು ಮಾತಾನಾಡುತ್ತಾ, ಸಾಯಿ ಮಂದಿರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ, ಮೂರೋತ್ತು ಮಾಡುತ್ತಿರುವುದು, ಎಲ್ಲಿಂದ ಕರೆ ಬರುತ್ತೊ ಅಲ್ಲಿಗೆ ಆಹಾರವನ್ನ ತಲುಪಿಸುವುದು ಬಹಳ ಪ್ರಶಂಸನೀಯ. ಈ ದೇಶದ ಪ್ರಧಾನ ಮಂತ್ರಿಯವರ ಒಂದು ಹೇಳಿಕೆ ನೀಡಿದ್ದಾರೆ ” ಸೇವಾಹಿ ಸಂಘಟನ್ ” ನರೇಂದ್ರ ಮೋದಿಯವರ ಈ ಹೇಳಿಕೆ ನಿಜಕ್ಕೂ ಸಾಯಿ ಮಂದಿರ ಪೂರ್ಣ ಮಾಡುತ್ತಿದೆ ಎಂದನಿಸುತ್ತದೆ ಇವರು ಮಾಡುವಂತ ದಾಸೋಹಕ್ಕೆ ನಿಜವಾಗಿ ಹೋಲುತ್ತದೆ ಪ್ರಧಾನ ಮಂತ್ರಿಯವರ ಹೇಳಿಕೆ. ಕೋರೊನ ರೋಗಕ್ಕಿಂತ ಹಸಿವು ಎಂಬ ರೋಗ ಬಹಳ ದೊಡ್ಡದು ಈ ನಿಟ್ಟಿನಲ್ಲಿ ಹಸಿವು ಮುಕ್ತ ನಗರ ಮಾಡುತ್ತಿರುವ ಸಾಯಿಮಂದಿರಕ್ಕೆ, ಉಮೇಶ್ ಗೊ.ಕಾರ್ಜೊಳ್ ಹಾಗೂ ಸಾಯಿ ಕಿರಣ್ ಆದೋನಿ ಸಾಯಿ ಮಂದಿರ ಅಧ್ಯಕ್ಷರು, ಹಾಗೂ ದಾಸೋಹದ ಕಾಯಕದ ಹಿಂದೆ ನಿಂತು ಮುನ್ನಡೆಸುತ್ತಿರುವ ಡಾ.ಬಸನಗೌಡ ಪಾಟೀಲ್ ಕಣ್ವ ಆಸ್ಪತ್ರೆ, ಇವರಿಗೆ ಧನ್ಯವಾದಗಳು ವಾದಗಳು ಎಂದು ಹೆಳಿದರು.ಈ ಒಂದು ಸಂಧರ್ಭದಲ್ಲಿ ಬಾಜಪ ಜಿಲ್ಲಾಧ್ಯಕ್ಷರಾದ ರಮಾನಂದ ಯಾಧವ್, ಬಿಜೆಪಿಯ ಮುಖಂಡರಾದ ರವೀಂದ್ರ ಜಲ್ದಾರ್,ಮೌನೇಶ ನಾಯಕ, ಡಾ.ನಾಗರಾಜ್ ಬಾಲ್ಕಿ, ಕಡವಲು ಆಂಜನೇಯ,ಡಿ.ವಿರೇಶ ಕುಮಾರ,ಪ್ರಧಾನ ಕಾರ್ಯದರ್ಶಿ ಬಾಜಪದ ಡಿ.ಶಂಕರ್ ರೆಡ್ಡಿ, ಡಿಂಗ್ರಿ ನರೇಶ ಚಿತ್ರ ನಟ, ತಿರುಪತಿ ಮತ್ತಿತರು ಅನೇಕ ಸಾಯಿ ಸೇವಕರು ಭಾಗಿಯಾಗಿದ್ದರು.