ಅನ್ನ ದಾಸೋಹದ ಜೊತೆಗೆ ಅಕ್ಷರದಾಸೋಹ,  ಕಾನಮಡುಗು ಮಠದ ವೈಶಿಷ್ಟ್ಯ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ. 23 : – ತಾಲೂಕಿನ ಕಾನಾಮಡುಗು ಮಠ ಅನ್ನದಾಸೋಹದ ಜೊತೆಗೆ ಅಕ್ಷರದಾಸೋಹ ನೀಡುವ ವೈಶಿಷ್ಟ್ಯತೆಯನ್ನು ಹೊಂದಿರುವ ಶಿಕ್ಷಣದ  ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿಯಾಗಿದೆ ಎಂದು  ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಂಗಳವಾರ ತಾಲೂಕಿನ ಕಾನಾಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠಕ್ಕೆ ಭೇಟಿ ನೀಡಿ ಶ್ರೀ ಕ್ಷೇತ್ರನಾಥನ ದರ್ಶನ ಪಡೆದ ನಂತರ ಮಾತನಾಡಿ ಅವರು  ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿನಲ್ಲಿರುವ  ಕಾನಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠಕ್ಕೆ ಮೂರು ಶತಮಾನಗಳ ಇತಿಹಾಸವಿರುವ ಸಂಗತಿ ಕೇಳಿ ಸಂತೋಷವಾಯಿತು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ ಅವರನ್ನು ದಾಸೋಹ ಮಠದ ವತಿಯಿಂದ ಧರ್ಮಾಧಿಕಾರಿಗಳಾದ ದಾ.ಮ ಐಮಡಿ ಶರಣಾರ್ಯರು ಸೇರಿ ಇತರರು ಸನ್ಮಾನಿಸಿ ಗೌರವಿಸಿದರು. ಈ ವೇಳೆ  ನಿವೃತ್ತ ಶಿಕ್ಷಕ ನೀರಗಂಟಿ ಶರಣಪ್ಪ, ಶಿಕ್ಷಕ ಬಿ.ಜಿ.ಪಾಟೀಲ್, ಶಿವಣ್ಣ, ಯುವಕರಾದ ಬಸವರಾಜ, ವಿಕ್ರಮ್ ಸಿಂಗ್, ಬಸವನಗೌಡ, ಅರುಣಾಚಾರಿ, ಚನ್ನವೀರಸ್ವಾಮಿ ಇತರರಿದ್ದರು.