ಅನ್ನುಲಾಬಾಯಿಗೆ ಕಾಯಕ ಸೇವಾರತ್ನ ಪ್ರಶಸ್ತಿ

ಕಲಬುರಗಿ, ಏ 2: ಅಳಂದ ತಾಲೂಕಿನ ಸುಂಟನೂರ ಗ್ರಾಮದ ಯಶಸ್ವಿ ರೈತ ಮಹಿಳೆ ಅನ್ನುಲಾಬಾಯಿ ಎಸ್ ಹಿರೇಮಠÀವರಿಗೆ ಕಲಬುರ್ಗಿಯ ಕಾಯಕಯೋಗಿ ಸೇವಾ ಸಂಸ್ಥೆ ಕಾಯಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.ವೃತ್ತಿಯಲ್ಲಿ ಅಂಗನವಾಡಿ ಶಿಕ್ಷಕಿಯಾದರೂ ಕೂಡ ಕೃಷಿ ಕಾಯಕದ ಮೇಲೆ ಅಪಾರವಾದ ಪ್ರೀತಿ,ಕಾಳಜಿ ಹೊಂದಿ, ಕಬ್ಬು ಮತ್ತು ರೇಷಿಮೆಗಳನ್ನು ಬೆಳೆದ ಅಪಾರವಾದ ಅನುಭವ ಇವರದ್ದು. ಇವರ ಪತಿ ದಿ.ಸೋಮಯ್ಯ ಸ್ವಾಮಿ ಹಿರೇಮಠ ಪಿಡಬ್ಲ್ಯೂಡಿ ಅಧಿಕಾರಿಗಳಾಗಿದ್ದರು. ಅನ್ನುಲಾಬಾಯಿ ಅವರು ಎಡಬಿಡದೆ ಕೃಷಿ ಕಾಯಕವನ್ನು ಮಾಡುತ್ತಾ ಯುವ ರೈತ ಸಮೂಹಕ್ಕೆ ಇವರ ಮಾರ್ಗದರ್ಶನ ಇಂದಿಗೂ ಮುಂದುವರೆದಿದೆ. ಗ್ರಾಮಸ್ಥರಾದ ನೀಲಕಂಠಯ್ಯ ಸ್ವಾಮಿ, ಶಿವಾನಂದ ಹಿರೇಮಠ,ಸಿದ್ದೇಶ್ವರ ಸ್ವಾಮಿ,ಬಂಡಯ್ಯ ಸ್ವಾಮಿ,ಸಂಗಯ್ಯ ಸ್ವಾಮಿ ಮಠಪತಿ ಅವರು ನಮ್ಮ ಗ್ರಾಮದ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.