ಅನ್ನಭಾಗ್ಯ ಯೋಜನೆಗೆ ಹತ್ತು ವರ್ಷ: ಜು. 10ರಂದು ಬೆಂಗಳೂರಿನಲ್ಲಿ ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ

ಕಲಬುರಗಿ:ಜು.05:ಅನ್ನಭಾಗ್ಯ ಯೋಜನೆಗೆ ಹತ್ತು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಇದೇ ಜುಲೈ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೆಳಿಗ್ಗೆ 11 ಗಂಟೆಗೆ ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಕರ್ನಾಟಕ ಶ್ರಮಿಕ ಶಕ್ತಿ ಲೋಡಿಂಗ್ ಆಂಡ್ ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಉದಯಕುಮಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಲವು ದಶಕಗಳಿಂದ ಪಡಿತರ ವಿತರಣಾ ವ್ಯವಸ್ಥೆ ಜಾರಿಯಲ್ಲಿದೆ. ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತಿದೆ. ಸಿದ್ಧರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರ 2013ರಲ್ಲಿ ಅದಕ್ಕೆ ಅನ್ನಭಾಗ್ಯ ಯೋಜನೆಯೆಂದು ಹೆಸರಿಟ್ಟು ಒಂದು ಸಮಗ್ರ ನೀತಿ ಜಾರಿ ಮಾಡಿದ್ದು ಬಡವರ ಬದುಕಿನ ಬಹುದೊಡ್ಡ ಆಸರೆಯಾಗಿದೆ. ಇದು ಜುಲೈ ಹತ್ತರಂದು ಹತ್ತು ವರ್ಷಗಳಾಗಲಿದೆ ಎಂದರು.
ಈ ಮಧ್ಯೆ ಅನ್ನಭಾಗ್ಯ ಯೋಜನೆ ಸಾಕಷ್ಟು ವಿವಾದದ ವಿಚಾರವೂ ಆಗಿದೆ. ವಿವಿಧ ಆಯಾಮಗಳಿಂದ ಯೋಜನೆಯ ಯಶಸ್ವಿಗೆ ಕಾರಣರಾದ ಲೋಡಿಂಗ್ ಕಾರ್ಮಿಕರ ಪರಿಸ್ಥಿತಿ ಯೋಜನೆಯ ಯೋಜನೆಯ ಯಶಸ್ವರಿಗೆ ಸಹಸ್ರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಾರ್ಮಿಕರ ಬವಣೆಯನ್ನು ಆಳುವವರಾಗಲಿ, ಸಮಾಜವಾಗಲಿ ಕೇಳಿಸಿಕೊಂಡಿದ್ದು ಕಡಿಮೆ. ಹಾಗಾಗಿ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಲೋಡಿಂಗ್ ಕಾರ್ಮಿಕರಿಗೆ ನಿರ್ಧಿಷ್ಟ ಪ್ರಮಾಣದಲ್ಲಿ ಕೂಲಿ ಕೆಲಸದ ಭದ್ರತೆ ಇಲ್ಲವಾಗಿದೆ. ಹಮಾಲಿ ಕಾರ್ಮಿಕರ ಕೆಲಸದ ಭದ್ರತೆ ಮತ್ತು ಮತ್ತು ಅನೇಕ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲಾಗುತ್ತಿದೆ. ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಇಲ್ಲವೇ ಅವರ ಪರವಾಗಿ ಹಿರಿಯ ಸಚಿವರು ಬಂದು ಹಕ್ಕೊತ್ತಾಯಗಳನ್ನು ಸ್ವೀಕರಿಸುವರು ಎಂದು ಅವರು ತಿಳಿಸಿದರು.
ಅನ್ನಭಾಗ್ಯ ಯೋಜನೆಗೆ ಪೂರಕವಾಗಿ ರಾಜ್ಯ ಉಗ್ರಾಣ ನಿಗಮ, ರೈಲ್ವೆ, ಗೂಡ್ಸ್ ಶೆಡ್, ಎಪಿಎಂಸಿಗಳಲ್ಲಿ ಹಾಗೂ ವರ್ತಕರ ಅಂಗಡಿಗಳಲ್ಲಿ ಪೇಟೆ ಬೀದಿಗಳಲ್ಲಿ ಹತ್ತಾರು ಲಕ್ಷ ಹಮಾಲಿ ಕಾರ್ಮಿಕರು ಕೆಲಸ ಮಹಾರಾಷ್ಟ್ರದಲ್ಲಿ 1969ರಲ್ಲೇ ಕಲ್ಯಾಣ ಮಂಡಳಿ ರಚನೆ ಮಾಡಿದ್ದು, ಕರ್ನಾಟಕದಲ್ಲೂ ಸಹ ಅಂತಹ ಮಂಡಳಿ ರಚಿಸುವಂತೆ, ಅನ್ನಭಾಗ್ಯ ಯೋಜನೆ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಯಾವುದೇ ಸರ್ಕಾರದಿಂದಾಗಲಿ, ಗುತ್ತಿಗೆದಾರರು ಕಿರುಕುಳ ಕೆಲಸದಿಂದ ಕಿತ್ತು ಹಾಕುವುದನ್ನು ತಪ್ಪಿಸಲು ಕೆಲಸದ ಭದ್ರತೆ ನೀಡುವಂತೆ, ಕಾರ್ಮಿಕ ವಿರೋಧಿಯಾದ 8 ಗಂಟೆಗಳ ಕೆಲಸದ ಅವಧಿಯನ್ನು ಹಿಂದಿನ ಸರ್ಕಾರ 12 ಗಂಟೆಗೆ ಹೆಚ್ಚಿಸಿದ್ದು, ಕೂಡಲೇ ಹೆಚ್ಚುವರಿ ಕೆಲಸದ ಅವಧಿಯನ್ನು ಹಿಂಪಡೆಯುವಂತೆ ಅವರು ಒತ್ತಾಯಿಸಿದರು.
ಅನ್ನಭಾಗ್ಯ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಪ್ರತಿ ವರ್ಷ ಕೂಲಿ ದರ ಹೆಚ್ಚಿಸಲು ಸಮಗ್ರ ನಿಯಮಗಳನ್ನು ರೂಪಿಸುವಂತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಜಾರಿಗೆ ತರುವಂತೆ, ಎಲ್ಲ ಗುತ್ತಿಗೆ, ಅಸಂಘಟಿತ ಹಾಗೂ ಅಭದ್ರಿತ ಕಾರ್ಮಿಕರಿಗೆ ಕನಿಷ್ಠ 30 ಸಾವಿರ ರೂ.ಗಳ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಖಾತ್ರಿಗೊಳಿಸುವ ನೀತಿ ರೂಪಿಸುವಂತೆ, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ನಗದು ಹಣವನ್ನು ನೀಡುವುದನ್ನು ನಿಲ್ಲಿಸಿ ಆಹಾರ ಧಾನ್ಯಗಳನ್ನೇ ನೀಡುವಂತೆ, ಅನ್ನಭಾಗ್ಯ ಹಮಾಲಿ ಕಾರ್ಮಿಕರಿಗೆ ಸರ್ಕಾರವೇ ಆಹಾರ ನಿಗಮದ ಮೂಲಕ ನೇರ ವೇತನ ಪಾವತಿಸುವಂತೆ ಅವರು ಆಗ್ರಹಿಸಿದರು.
ಈ ಎಲ್ಲ ಹಕ್ಕೊತ್ತಾಯಗಳನ್ನು ಅಂದಿನ ಸಮಾವೇಶದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ರಾಜವಾಳ್, ರಮೇಶ್, ಅಡೆಪ್ಪ, ಬಿ.ಎಂ. ರಾವೂರ್ ಮುಂತಾದವರು ಉಪಸ್ಥಿತರಿದ್ದರು.