ಅನ್ನಭಾಗ್ಯ ಅಕ್ಕಿ ಸಾಗಾಟ; ಲಾರಿ ವಶ

ಚಳ್ಳಕೆರೆ.ನ.೨೫; ಬಡವರ ಅನ್ನಬಾಗ್ಯ ಅಕ್ಕಿಯನ್ನು ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಲಾರಿಯನ್ನು ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ತಳಕು ಬಳಿಯಲ್ಲಿ ವಶಕ್ಕೆ ಪಡೆದಿದ್ದಾರೆ.ಚಳ್ಳಕೆರೆ ತಾಲೂಕಿನ ತಳಕು ಹತ್ತಿರದಲ್ಲಿ ತಹಶೀಲ್ದಾರ್ ರಘುಮೂರ್ತಿ ಅವರ ಸರ್ಕಾರಿ ವಾಹನ ಮುಂದೆ ತೆರಳುತ್ತಿದ್ದಾಗ ಲಾರಿ ಚಾಲಕ ಹೆಚ್ಚು ವೇಗವಾಗಿ ಚಲಿಸಿದ್ದನ್ನು ಕಂಡ ತಹಶೀಲ್ದಾರ್  ಅನುಮಾನಸ್ಪದದಿಂದ ಲಾರಿಯನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದು ಯಾವುದೇ ಹೆಸರಿಲ್ಲದ ಬಿಳಿ ಚೀಲದಲ್ಲಿ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು ಕೂಡಲೇ ವಶಕ್ಕೆ ಪಡೆದು ತಳಕು ಪೋಲಿಸ್ ಠಾಣೆ ಬಳಿಗೆ ಲಾರಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಲಾರಿಯಲ್ಲಿ ಮೂರು ಜನ ಇದ್ದು ಅದರಲ್ಲಿ ಇಬ್ಬರು ಪರಾರಿಯಾಗಿದ್ದು ವಾಹನ ಚಾಲಕ ಮಾತ್ರ ಸಿಕ್ಕಿಬಿದ್ದಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದ ನಂತರ ಯಾರಿಗೆ ಸಂಬಂಧಿಸಿದ್ದ ಎಂಬ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.