ಅನ್ನಭಾಗ್ಯಕ್ಕೆ ಅಕ್ಕಿ-ಆಂದ್ರ,ತೆಲಂಗಾಣ ಸಮ್ಮತಿ

ಕೋಲಾರ,ಆ,೧೯-ಅನ್ನಭಾಗ್ಯ ಯೋಜನೆಯಡಿ, ಹೆಚ್ಚುವರಿ ಅಕ್ಕಿ ನೀಡಲು ಅಂಧ್ರ ಪ್ರದೇಶ ಮತ್ತು ತೆಲಗಾಂಣ ರಾಜ್ಯಗಳು ಮುಂದೆ ಬಂದಿದೆ ಎಂದ ಆಹಾರ ಮತ್ತು ನಾಗರೀಕ ಸರಬರಾಜು ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು,
ಮಾದ್ಯಮದವರೊಂದಿಗೆ ಅವರು ಮಾತನಾಡಿ ಈ ಎರರು ಸರ್ಕಾರಗಳು ಪ್ರತಿ ಕೆ.ಜಿ. ಅಕ್ಕಿಗೆ ೪೦ ರೂಗಳಂತೆ ದರ ನಿಗಧಿ ಮಾಡಿದೆ. ಕೇಂದ್ರ ಮತ್ತು ಆಹಾರ ನಿಗಮ ನಿಗಧಿ ಮಾಡಿರುವುದಕ್ಕಿಂತಲು ೬ ರೂ ಪ್ರತಿ ಕೆ.ಜಿ.ಗೆ ಹೆಚ್ಚಾಗಲಿದೆ. ಇಷ್ಟು ಹಣ ನೀಡಿದ ನಂತರವೂ ಅಕ್ಕಿಯನ್ನು ನಮ್ಮ ಗೋದಾಮುಗಳಿಗೆ ಸಾಗಾಣಿಕೆಯನ್ನು ಉಚಿತವಾಗಿ ಮಾಡುತ್ತಾರೋ ಅಧಾವ ಸಾಗಣಿಕೆ ವೆಚ್ಚವನ್ನು ನಮಗೆ ಭರಿಸ ಬೇಕೆಂದು ತಿಳಿಸುವರೋ ಎಂಬುವುದು ಇನ್ನು ಖಚಿತವಾಗಿಲ್ಲ ಎಂದರು.
ಕೇಂದ್ರ ಸರ್ಕಾರ ನಿಗಧಿ ಪಡೆಸಿರುವುದಕ್ಕಿಂತ ಹೆಚ್ಚು ನೀಡಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕೇಂದ್ರ ಸರ್ಕಾರ ನಿಗಧಿ ಪಡೆಸಿರುವುದಕ್ಕಿಂತ ಹೆಚ್ಚು ದರ ನಿಗಧಿ ಪಡಿಸಿ ಸಾಗಣಿಕೆ ವೆಚ್ಚವನ್ನು ಕೇಳಿದರೆ ಭರಿಸಲು ಸಾಧ್ಯವಿಲ್ಲ ಎಂದು ಹೇಳಿದರು,
ರಾಜ್ಯ ಸರ್ಕಾರದ ನಿಲುವನ್ನು ಅಂಧ್ರ ಪ್ರದೇಶ್ ಮತ್ತು ತೆಲಂಗಾಣ ರಾಜ್ಯಗಳಿಗೆ ತಿಳಿಸಿದ್ದು ಈ ಬಗ್ಗೆ ಅಧಿಕಾರಿಗಳು ಮಾತು ಕತೆಯನ್ನು ಮುಂದುವರೆಸಿದ್ದಾರೆ. ಇದು ಅಂತಿಮಗೊಳ್ಳುವವರೆಗೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅಕ್ಕಿ ಬದಲು ಹಣವನ್ನು ಸಂದಾಯ ಮಾಡಲು ನಿರ್ಧಾರಿಸಲಾಗಿದೆ ಎಂದು ತಿಳಿಸಿದರು,
ಪಡಿತರ ಚೀಟಿದಾರರಿಗೆ ಹೆಚ್ಚುವರಿ ೫ ಕೆ.ಜಿ. ಅಕ್ಕಿಯ ಬದಲು ಹಣ ನೀಡುತ್ತಿದ್ದು ಆಗಸ್ಟ್ ತಿಂಗಳ ಹಣವನ್ನು ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಂದು ವಾರದಲ್ಲಿ ಜಮೆಯಾಗಲಿದೆ..ಅಕ್ಕಿಯನ್ನು ಸಾಮಾನ್ಯವಾಗಿ ೧೦ ಅಥವಾ ೧೧ನೇ ತಾರೀಖು ಕೊಡುತ್ತಿದ್ದೇವು ತಾಮತ್ರಿಕ ಕಾರಣಗಳಿಂದ ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆ ತಡವಾಗಿದೆ. ಸಿಸ್ಟಮ್ ಸರಿ ಇರಲಿಲ್ಲ ಈಗಾ ಎಲ್ಲಾ ಸಿಸ್ಟಮ್‌ಗನ್ನು ಸರಿಪಡೆಸಲಾಗಿದೆ,ಒಂದು ಬಟನ್ ಒತ್ತಿದರೆ ಹಣ ಸಂದಾಯವಾಗಲಿದೆ ಎಂದರು.