ಅನ್ನಪುರ್ಣೇಶ್ವರಿ ದೇವಿ ಮಹಿಳಾ ಸಂಸ್ಥೆಯ ಕಾರ್ಯ ಶ್ಲಾಘನೀಯ: ಮಾಜಿ ಸಚಿವ ಪಾಟೀಲ

ಹುಮನಾಬಾದ್:ಅ.20: ವಿಜಯ ದಶಮಿ ಹಬ್ಬ ಮತ್ತು ಲೋಕಕಲ್ಯಾಣಕ್ಕಾಗಿ ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಸಂಸ್ಥೆ ಅವರು ಮಾಡುತ್ತಿರುವ ಸಮಾಜ ಮುಖಿ ಚಿಂತನೆ ಉಳ್ಳ ಕಾರ್ಯ ಶ್ಲಾಘನೀಯ, ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ ಅವರು ಹೇಳಿದರು.
ಇಲ್ಲಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ ವತಿಯಿಂದ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿದ ಲಲಿತ ಸಹಸೃನಾವ, ಹೋಮ ಹವನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್‍ನವರು ಸಂಸ್ಥೆಯನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜತೆ, ಜತೆಗೆ ಸಮಾಜ ಸೇವೆಯಲ್ಲಿ ತೋಡಗಿರುವುದು ಸಂತಸ ತಂದಿದೆ. ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್‍ನವರು ಮುಂದೆಯೂ ಇದೆ ರೀತಿ ಸಾಮಾಜಿಕ ಚಟುವಟಿಯಲ್ಲಿ ತೋಡಗಬೇಕು ಎಂದು ಸಲಹೆ ನೀಡಿದ ಅವರು ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಸಂಸ್ಥೆಯ ಅಭಿವೃದ್ದಿಗೆ ನಾನು ಸಹಾಯ ಸಹಕಾರ ನೀಡುತ್ತೇನೆ, ಎಂದು ಭರವಸೇ ನೀಡಿದರು.
ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಮಾತನಾಡಿ, ಲೋಕಕಲ್ಯಾಣ ಮತ್ತು ಸರ್ವರಿಗೂ ಸುಖಶಾಂತಿ ನೆಮ್ಮದಿ ಪ್ರಾಪಿಯಾಗಲಿ ಎಂದು ಹಾರೈಸಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ 9 ದಿನಗಳ ತನಕ ಲಲಿತ ಸಹಸೃನಾವ, ಹೋಮ ಹವನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಯೋಗಿತಾ ಡಾ. ಚಂದ್ರಶೇಖರ್ ಪಾಟೀಲ, ಮಹಾಲಕ್ಷಿ?? ಅಭಿಷೇಕ್ ಪಾಟೀಲ, ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್‍ನ ತಾಲ್ಲೂಕು ಉಪಾಧ್ಯಕ್ಷೆ ಶೋಭಾ ಗುರಮಿಟಕಲ್, ಕಾರ್ಯದರ್ಶಿ ಸುರೇಖಾ ವಿಭೂತಿ, ಕೋಶಾಧ್ಯಕ್ಷೆ ಸುಧಾರಾಣಿ ಪುಜಾರಿ, ಸದಸ್ಯರಾದ್ ಅನಿತಾ ಚಿದ್ರಿ, ದೌಪತಿ ಶಮಶಾಬಾದೆ, ಅನಿತಾ ಅಶೋಕ, ಕಲಾವತಿ ಬಾಬುಸಿಂಗ ರಾಜಪುತ್ ಇದ್ದರು.