ಅನ್ನದ ಖೀರು (ಪಾಯಸ):

ಬೇಕಾಗುವ ಸಾಮಗ್ರಿಗಳು:
ಅನ್ನ : ಒಂದು ಕಪ್
ಹಾಲು: ಎರಡು ಕಪ್
ಅರ್ಧ ಚಮಚ ಏಲಕ್ಕಿ ಪುಡಿ
ಸಕ್ಕರೆ : ಆರು ಚಮಚ
ಬಾದಾಮಿ, ದ್ರಾಕ್ಷಿ, ಗೋಡಂಬಿ – ಸ್ವಲ್ಪ
ಕೇಸರಿ : ಚಿಟಿಕೆ
ಮಾಡುವ ವಿಧಾನ:
ಒಂದು ಬಾಣೆಲೆಯನ್ನು ಮಧ್ಯ ಉರಿಯಲ್ಲಿ ಸ್ಟೌ ಮೇಲಿಟ್ಟು ಅದಕ್ಕೆ ಹಾಲು, ಸಕ್ಕರೆ, ಕೇಸರಿ, ಅನ್ನ ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ. ಪಾತ್ರೆಯ ಬುಡ ಹಿಡಿಯದಂತೆ ಪಾಯಸವನ್ನು ಇಪ್ಪತ್ತು ನಿಮಿಷ ಕಲಕುತ್ತಿರಿ. ಹಾಲು ಸ್ವಲ್ಪ ಗಟ್ಟಿಯಾಗುತ್ತಾ ಬಂದಾಗ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ ಮತ್ತು ದ್ರಾಕ್ಷಿಯನ್ನು ಪಾಯಸಕ್ಕೆ ಸೇರಿಸಿದರೆ ಬಿಸಿ ಬಿಸಿಯಾದ ಪಾಯಸ ಸವಿಯಲು ರೆಡಿಯಾಗುತ್ತದೆ. ನೀವು ಇದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಡೆಸರ್ಟ್‌ನ ರೂಪದಲ್ಲೂ ತಿನ್ನಬಹುದು.