ಅನ್ನದಾಸೋಹ ಕಾರ್ಯ ಶ್ಲಾಘನೀಯ- ಎಂ ಪವನ್

ರಾಯಚೂರು, ಜೂ.೪- ನಗರ ಸಭೆ ಮಾಜಿ ಸದಸ್ಯ ಎಂ.ಪವನ್ ಕುಮಾರ್ ಇಂದು ಸಾಯಿ ಮಂದಿರಕ್ಕೆ ಬೇಟಿ ನೀಡಿ ಮಾತನಾಡಿದ ಅವರು ಸಾಯಿ ಮಂದಿರದ ವತಿಯಿಂದ ೧೬ ದಿನಗಳಿಂದ ನಡೆಯುತ್ತಿರುವ ಸಾಯಿ ಕಿರಣ್ ಆದೋನಿ ನೀಡುವ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಾತಿ, ಧರ್ಮ, ಪಕ್ಷ ಇವೆಲ್ಲಕ್ಕಿಂತ ಅನ್ನ ದಾಸೋಹ ಎಂಬುದು ಶ್ರೇಷ್ಠ ಕಾಯಕ. ಈ ಕಾಯಕ ನಿರಂತರವಾಗಿ ಮಾಡುತ್ತಾ ಬಂದಿರುವ ಸಾಯಿ ಮಂದಿರ ಮಹತ್ವದ ಕೆಲಸ ಮಾಡುತ್ತಿದೆ ರಾಯಚೂರು ನಗರದಲ್ಲಿ. ಕೊಟ್ಟು ಕೊರಗಬೇಡಿ ಇಟ್ಟಿಕ್ಕಿ ಹಂಗಿಸಬೇಡಿ,ಎಷ್ಟು ಉಂಡರೆಂದು ಹೀಯಾಳಿಸಬೇಡಿ, ಅನ್ನ ನನ್ನದೆಂದು ಅನ್ನಬೇಡಿ, ಅನ್ನಕ್ಕಿಂತ ಶ್ರೇಷ್ಠ ಮತ್ತೊಂದಿಲ್ಲ ದಾನ ಮಾಡಿ ಕೆಟ್ಟೊರಿಲ್ಲ ಎಂಬ ಈ ವಾಕ್ಯದಂತೆ ಶರಣರ ದಾಸೋಹವನ್ನ ೨೧ ನೆ ಶತಮಾನದಲ್ಲಿ ಶರಣರ ಕಾರ್ಯವನ್ನು ಸಾಯಿ ಮಂದಿರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮತ್ತು ಶರಣರ ನೆನಪು ಮತ್ತೆ ಮರುಕಳಿಸುವಂತೆ ಮಾಡಿದೆ
ಎಂದರು.
ಅನ್ನದಾಸೋಹ ಕಾರ್ಯದಲ್ಲಿ ಸ್ವತಹ ಪಾಲ್ಗೊಂಡು ದಾಸೋಹದ ಕಾಯಕವನ್ನು ಮಾಡಿದರು.
ಈ ಸಂದರ್ಭದಲ್ಲಿ ಸಾಯಿ ಮಂದಿರದ ಅಧ್ಯಕ್ಷ ಹಾಗೂ ಸಂಸ್ಥಾಪಕ ಸಾಯಿ ಕಿರಣ್ ಆದೋನಿ, ಡಾ.ಬಸನಗೌಡ ಪಾಟೀಲ್,ಸೇರಿದಂತೆ ಇತರರು ಉಪಸ್ಥಿತರಿದ್ದರು.