ಅನ್ನದಾಸೋಹ ಕಾರ್ಯಕ್ರಮ-ಶ್ಲಾಘನೀಯಾ

ಅರಕೇರಾ.ಜೂ.೭- ಕೊರೊನಾ ಸಂಕಷ್ಟ ಸಮಯದಲ್ಲಿ ಜನರ ಸಮಸ್ಯೆ ಅರಿತುಕೊಂಡಿರುವ ನಮ್ಮ ಶಾಸಕರಾದ ಕೆ.ಶಿವನಗೌಡನಾಯಕರವರು ಕೆಎಸ್‌ಎನ್ ಅನ್ನದಾಸೋಹ ಕೇಂದ್ರವನ್ನು ಪ್ರಾರಂಬಿಸಿ ಬಡವರ್ಗದವರಿಗೆ ಪೌಷ್ಟಿಕ ಆಹಾರ ಮತ್ತು ಮೊಟ್ಟೆ ಶುದ್ದ ಕುಡಿಯು ನೀರಿನ ಬಾಟ್ಲನ್ನು ನೀಡಿ ಬಡವರ್ಗದವರಿಗೂ ಆಸ್ಪತ್ರೆಯಲ್ಲಿ ಚಿಕ್ಸಿತೆ ಬಂದವರಿಗೂ ವೈದ್ಯ ಸಿಬ್ಬಂದಿವರ್ಗದವರಿಗೂ ಇರುವ ಕಡೆಗೆ ಬಂದು ಮನೆ ಮನೆಗೆ ಬಂದು ಊಟನೀಡುತ್ತಿರುವದು ಶ್ಲಾಘನೀಯಾ ಕಾರ್ಯವಾಗಿದೆಂದು ಡಾ|| ಎಚ್ ಎ ನಾಡಗೌಡ ನಾಮನಿರ್ದೇಶಿತ ಸದಸ್ಯರು ರಾಯಚೂರು ರಿಮ್ಸ್ ಹಾಗೂ ಮಾಜಿ ಜಿ.ಪಂ.ಸ ಹೇಳಿದರು.
ಅವರು ಅರಕೇರಾ ಗ್ರಾಮದಲ್ಲಿನ ವಾರ್ಡುನಂಬರ ೧ಮತ್ತು ೨ವಾರ್ಡುಗಳಲ್ಲಿನ ನಿವಾಸಿಗಳಿಗೆ ಕೆ ಎಸ್ ಎನ್ ಅನ್ನದಾಸೋಹ ಕೇಂದ್ರದಿಂದ ತೈಯಾರಿಸಿದ ಪೌಷ್ಟಿಕ ಆಹಾರ,ಮೊಟ್ಟೆ ಕುಡಿಯುವ ನೀರು ಮಾಸ್ಕ್ ವಿತರಣೆಯನ್ನು ಬಿಜೆಪಿ ಹಿರಿಯ ಮುಖಮಡರಾದ ಕೆ.ಅನಂತರಾಜನಾಯಕ ವಿತರಣೆಮಾಡಿದ ಸಂದರ್ಬದಲ್ಲಿ ಭಾಗವಹಿಸಿ ಮಾತನಾಮಾಡುತ್ತಾ ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ ನಮ್ಮ ಹಸಿವನ್ನು ನೀಗಿಸುವ ಅನ್ನ ದೇವರ ಸಮಾನ ಎನ್ನುವಂತೆ ನಮ್ಮ ಶಾಸಕರು ಕೊರನಾ ಸಂಕಷ್ಟ ಸಂದರ್ಬದಲ್ಲಿ ಬಡವರ್ಗದವರಿಗೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಬರುವ ಹಳ್ಳಿಗಳಿಗೆ ಹೋಗಿ ತಮ್ಮ ಕಾರ್ಯಕರ್ತರಿಂದ ದಿನಾಲು ಊಟದ ಪೋಟಣ ನೀಡುತ್ತಿರುವದು ಬಡವರ್ಗದವರಿಗೆ ಅನುಕೂಲವಾಗಿದೆ ಎಂದರು.
ಕೆ.ಅನಂತರಾನಯಾಕ ಬಿಜೆಪಿ ಹಿರಿಯ ಮುಖಂಡರು ಮಾತನಾಡಿ ಬಡವರ್ಗದವರಿಗೆ ಕೆಎಸ್ ಎನ್ ಅನ್ನದಾಸೋಹ ಕೇಂದ್ರದ ಮೂಲಕ ಬಡಜನರಿಗೆ ಪ್ರತಿದಿನ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಿಊಟವನ್ನು ನೀಡುತ್ತಿರುವ ನಮ್ಮ ಶಾಸಕರು ಒಳ್ಳೆ ಕೆಲಸಮಾಡುತ್ತಿದ್ದಾರೆ ಪ್ರತಿಯೊಬ್ಬರು ಇದರ ಸದುಪೋಗಪಡಿಸಿಕೊಳ್ಳಬೇಕೆಂದರು.ಸಂದರ್ಭದಲ್ಲಿ ಚಂದ್ರಶೇಖರಶೆಟ್ಟಿ ,ಕೆ.ಭಗವಂತ್ರಾಯನಾಯಕ, ವೆಂಕೋಬನಾಯಕ ಬಿಚ್ಚದ ಶಿವುಕುಮಾರಬಳೆ, ರವಿನಾಯಕ, ಗ್ರಾ.ಪಂ.ಸದಸ್ಯರಾದ ವೆಂಕಟೇಶನಾಯಕ ಕರ್ನಾಳ.ವಿಶ್ವನಾಥಹೊಸಮನಿ,ವಿರೇಶಬೇರಿ, ಇಸ್ಮಯಲ್ ಸಾಬ, ಮುದುಕಪ್ಪಮೇಣಸಿನಕಾಯಿ, ಕರಿಂಸಾಬ ಎಸ್ ಡಿಎಂಸಿ ಅಧ್ಯಕ್ಷರು, ಸೀತರಾಮುನಾಯ್ಕ ಬಿ.ಗಣೇಕಲ್, ಮತ್ತು ಬಿಜೆಪಿ ಕಾರ್ಯಕರ್ತರು ಕೆಎಸ್‌ಎನ್ ಅಭಿಮಾನಿಗಳು ಉಪಸ್ಥಿತರಿದ್ದರು.