ಅನ್ನದಾನ ಮಹಾ ದಾನ-ಬಸನಗೌಡ ದದ್ದಲ್

ಯರಗೇರಾ ಕಪನೇಶ್ವರ ದೇವಸ್ಥಾನದಿಂದ ೫೦೦ ಆಹಾರ ಪೊಟ್ಟಣಗಳ ವಿತರಣೆ
ರಾಯಚೂರು.ಜು.೦೭.ಯರಗೇರಾ ಕಪನೇಶ್ವರ ಮಠದಿಂದ ಕೋವಿಡ್-೧೯ ರೋಗದ ಲಾಕಡೌನ್ ಹಿನ್ನೆಲೆಯಲ್ಲಿ ನಿರಂತರ ಕೆಲಸ ಮಾಡುತ್ತಿರುವ ಪೋಲಿಸ್ ಹಾಗೂ ನಿರಾಶ್ರಿತರಿಗೆ, ರೋಗಿಗಳ ಅಟೆಂಡರ್ ಗಳಿಗೆ ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಆಹಾರ, ನೀರು ವಿತರಿಸಿದರು.ತಾಲೂಕಿನ ಯರಗೇರಾ ಶ್ರೀ ಕಪನೇಶ್ವರ ಮಠದಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ೫೦೦ ಆಹಾರ ಪೊಟ್ಟಣಗಳ ವಿತರಣೆ ಮಾಡಲಾಯಿತು.
ಆಹಾರ ಪೊಟ್ಟಣಗಳ ವಿತರಣೆಗೆ ಚಾಲನೆ ನೀಡಿ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಕರೋನಾ ರೋಗದ ಲಾಕಡೌನ್ ಹಿನ್ನೆಲೆಯಲ್ಲಿ ಅಸ್ಪತ್ರೆಯ ರೋಗಿಗಳ ಅಟೆಂಡರ್, ಪೌರ ಕಾರ್ಮಿಕರಿಗೆ, ಪೋಲಿಸ್ ಸಿಬ್ಬಂದಿಗಳಿಗೆ, ಬಡವರಿಗೆ, ನಿರ್ಗತಿಕರಿಗೆ, ಹಸಿದವರಿಗೆ ಅನ್ನ ನೀಡುವದು ದಾನಗಳಲ್ಲಿಯೇ ಶ್ರೆಷ್ಠ ದಾನವಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ರೈಂ ಪಿಎಸ್ ಐ ಶಾಂತಮ್ಮ, ಎಸ್ ಎಸ್ ಹಿರೇಮಠ ರಾಯಚೂರು, ಊರಿನ ಮುಖಂಡರಾದ ಜನಾರ್ದನ್ ರಡ್ಡಿ, ಫಾರುಖ್, , ಯರಗೇರಾ ಗ್ರಾ.ಪಂ ಉಪಾದ್ಯಕ್ಷ ನಾರಾಯಣ, ವಿಜಯ್, ಮಹಾದೇವ್, ನಾಗರಾಜ , ನರಸಿಂಹ, ರಾಕೇಶ ತಾಯಪ್ಪ, ನರಸಿಂಹ, ಅರ್ಚಕರಾದ ಜಂಬುನಾಥಬ ಸ್ವಾಮಿ, ಬಸವರಾಜ ಸ್ವಾಮಿ, ಶಂಕ್ರಯ್ಯ ಸ್ವಾಮಿ, ಸೇರಿದಂತೆ ಇತರರಿದ್ದರು.
ಕೆ. ಶಾಂತಪ್ಪ, ನಗರಸಭೆ ಸದಸ್ಯ ತಿಮ್ಮಪ್ಪ ನಾಯಕ, ನಗರಸಭೆ ಸದಸ್ಯರಾದ ಹರಿಬಾಬು ರಾಂಪುರ, ಮಲ್ಲೇಶ ಬೊಟ್ಟು, ರಂಗಸ್ವಾಮಿ ಅಸ್ಕಿಹಾಳ್ , ರಾಜೇಶ, ನಾಗರಾಜ ಅಸ್ಕಿಹಾಳ, ನರಸಿಂಹಲು, ರಮೇಶ, ಶಂಕರಯ್ಯಸ್ವಾಮಿ ಪಾತಾಪುರ, ಪ್ರದೀಪ ಕುಮಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.