ಅನ್ನದಾನೇಶ್ವರ ಮಠದಲ್ಲಿ “ಅಕ್ಕನ ಬಳಗ” ಉದ್ಘಾಟನೆ

ದಾವಣಗೆರೆ-ಜು-30, ಅಡುಗೆ ಮನೆಯಿಂದ ಅರಿವಿನ ಮನೆಗೆ ಮಹಿಳೆಯನ್ನು ಕರೆ ತಂದಿದ್ದು ಶ್ರೀ ಅಕ್ಕಮಹಾದೇವಿ, ಅಂತೆಯೇ ಶಿವಶರಣ-ಶರಣೆಯರ ವಚನಗಳನ್ನು ಮನೆ ಮನೆಗೆ, ಜನರ ಮನಸ್ಸಿಗೆ ಮುಟ್ಟಿಸುವ ಉದ್ದೇಶದಿಂದ ಅಕ್ಕನ ಬಳಗಕ್ಕೆ ಚಾಲನೆ ನೀಡಲಾಯಿತು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಸುಮತಿ ಜಯ್ಯಪ್ಪ ಬಣ್ಣಿಸಿದರು.ಅವರು ದೇವರಾಜ ಅರಡು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ 248ನೇ ಶಿವಾನುಭವ ಸಂಪದ ಹಾಗೂ ಅಕ್ಕನ ಬಳಗವನ್ನು ಉದ್ಘಾಟಿಸಿ ಮಾತನಾಡುತ್ತಾ ಅಕ್ಕ, ಅಣ್ಣ, ತಮ್ಮ, ತಂಗಿಯರ ಸಂಬAಧಗಳಿAದ ಅನೇಕರು ಕಲಿತುಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಅಕ್ಕನ ಬಳಗದ ಅವಶ್ಯಕತೆ ಇದೆ. ಇದಕ್ಕೆ ಗಲ್ಲಿ ಗಲ್ಲಿಯಲ್ಲಿರುವ ಮಠ, ಮಂದಿರಗಳಲ್ಲಿ ಸಂಬAಧಗಳನ್ನು ಬೆಸೆಯುವ ಕಾರ್ಯವಾಗಬೇಕೆಂದು ಕರೆ ನೀಡಿದರು.ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಹಿಂದಿನ ಗುರುಗಳು 1936ರಲ್ಲಿ ಶ್ರೀ ಜಯದೇವ ತಾಯಿ ಲಿಗಾಡೆ ಮತ್ತು ಶಾಂತಾದೇವಿ ಮಾಳವಾಡದಿಂದ ಅಕ್ಕನ ಬಳಗಕ್ಕೆ ಚಾಲನೆ ಸಿಕ್ಕರೆ. 1916ರಲ್ಲಿ ದಾವಣಗೆರೆಯ ವಿರಕ್ತಮಠದಲ್ಲಿ ಹರ್ಡೆಕರ್ ಮಂಜಪ್ಪನವರು ಶ್ರೀ ಮೃತ್ಯುಂಜಯಪ್ಪಗಳು ಶ್ರೀ ಬಸವೇಶ್ವರ ಜಯಂತಿಗೆ ಚಾಲನೆ ನೀಡಿ ಅಣ್ಣನ ಬಳಗಕ್ಕೆ ಒತ್ತು ನೀಡಿದರು. ಇದು ಇತಿಹಾಸವಾದರೂ ವಿಶ್ವ ಪ್ರಸಿದ್ಧವಾಯಿತು ಎಂದರು.ವಚನಗಳ ಪ್ರಚಾರದ ಜೊತೆಗೆ ಸ್ವಾತಂತ್ರö್ಯ ಪೂರ್ವದಲ್ಲಿ ಗುಡಿ ಕೈಗಾರಿಕೆಗಳ ಮೂಲಕ ದೇಶದ ರಾಷ್ಟçಧ್ವಜ ನೆಯುವ ಮೂಲಕ ಮಹಿಳೆಯರು ರಾಷ್ಟçಪ್ರೇಮವನ್ನು ಮೆರೆದರು. ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗದ ಶ್ರೀಮತಿ ದ್ರೌಪದಿ ಮುರ್ಮುರವರು ರಾಷ್ಟçಪತಿಯಾಗಿದ್ದಾರೆ. ಈ ಮಟ್ಟದಲ್ಲಿ ಮಹಿಳೆ ಎತ್ತರಕ್ಕೆ ಬೆಳೆಯುತ್ತಿರುವುದು ಶ್ಲಾಘನೀಯ. ಅಕ್ಕಮಹಾದೇವಿಯ ವಚನದಂತೆ ಮಹಿಳೆಯರು ಯಾವುದಕ್ಕೂ ಅಂಜಬಾರದು, ಮನೆಯ ಸಂಸ್ಕೃತಿ, ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಮಹಿಳೆ ಆದರ್ಶವಾಗಿರಬೇಕು. ಇಡೀ ಕುಟುಂಬದ ನೆಮ್ಮದಿ ಕಾಪಾಡುವುದರ ಮೂಲಕ ಸೊರಗುತ್ತಿರುವ ಅಡುಗೆ ಮನೆಯ ಸಂಸ್ಕೃತಿಯನ್ನು ಮಹಿಳೆಯರು ಉಳಿಸಬೇಕೆಂದರು.ದಿವ್ಯ ಸಾನಿದ್ಯ ವಹಿಸಿದ್ದ ಅವರಗೊಳ್ಳ ಪುರವರ್ಗ ಮಠದ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರು ಆಶೀರ್ವಚನ ನೀಡುತ್ತಾ ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಮುಂದುವರೆದು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾಳೆ, ಹಬ್ಬಗಳ ತವರೂರು ಆದ “ಶ್ರಾವಣ ಮಾಸದಲ್ಲಿ” ಅವರ ಅಪಾರ ಭಕ್ತಿಗೆ ಪಾರವೇ ಇಲ್ಲವೆಂದರು.ಇದೇ ಸಂದರ್ಭದಲ್ಲಿ ಜುಲೈ ತಿಂಗಳಲ್ಲಿ ಜನ್ಮದಿನ ಆಚರಿಸಿಕೊಂಡ ಸ್ಮಾರ್ಟ್ ಸಿಟಿಯ ಎಂ.ಡಿ.ರವೀಂದ್ರ ಮಲ್ಲಪುರ, ಇಂಜಿನಿಯರ್ ಎಸ್.ಎಸ್. ಬಿರಾದಾರ್, ಇಂದಿನ ಸುದ್ದಿ ಸಂಪಾದಕ ವೀರಪ್ಪ ಎಂ.ಭಾವಿ ಇವರುಳನ್ನು ಗೌರವಿಸಿ, ಆಶೀರ್ವದಿಸಿದರು.