ಅನ್ನದಾನಕ್ಕೆ ಚಾಲನೆ ನೀಡಿದಶಾಸಕ ಭರತ್ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ 1: ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಮಂಡ್ಲೂರು ಅನೂಪ್ ಕುಮಾರ್‌ ಅವರ  ಜನ್ಮ ದಿನಾಚರಣೆ ಅಂಗವಾಗಿ ನಗರದ ವಿಮ್ಸ್ ಅಸ್ಪತ್ರೆ  ಆವರಣದಲ್ಲಿ ನಿನ್ನೆ ಹಮ್ಮಿಕೊಂಡಿದ್ದ  ಅನ್ನದಾನ ಕಾರ್ಯಕ್ರಮಕ್ಕೆ ನಗರ ಶಾಸಕ ನಾರಾ ಭರತ್ ರೆಡ್ಡಿ  ಚಾಲನೆ ನೀಡಿದರು.
 ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹಾಗೂ ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು  ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಎನ್.ಧನುಂಜಯ ಹಮಲ್‌ ಅವರು ಕೇಸರಿ ಬಾತ್ ಹಾಗೂ ಪಲಾವ್‌ನ್ನು ಅನ್ನದಾನದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮುಂಡ್ಲೂರು ಅನೂಪ್ ಕುಮಾರ್‌ ಅವರ  ಪುತ್ರ ಶ್ರೀರಾಮ್‌ ಅವರನ್ನು ಗೌರವಿಸಲಾಯ್ತು.  ಕಾಂಗ್ರೆಸ್ ಪಕ್ಷದ ಲೋಕೇಶ್ ,  ಯುವ ಮುಖಂಡರು,  ಕಾರ್ಯಕರ್ತರು ಭಾಗವಹಿಸಿದ್ದರು.