ಅನ್ನದಾತರ ಹೋರಾಟಕ್ಕೆ ಮಸ್ಕಿ ಮಂದಿ ಬೆಂಬಲ ಬಂದ್ ಯಶಸ್ವಿ ಪ್ರತಿಭಟನಾ ಮೆರವಣಿಗೆ

ಮಸ್ಕಿ,ಜ.೧೦- ಎನ್‌ಆರ್‌ಬಿಸಿ ವ್ಯಾಪ್ತಿಯ ೫ಎ ನೀರಾವರಿ ಕಾಲುವೆ ಯೋಜನೆ ಕಾರ್ಯಗತ ಗೊಳಿಸ ಬೇಕು ಎಂದು ಒತ್ತಾಯಿಸಿ ಕರ್ನಾಟಕ ನೀರಾವರಿ ಹೋರಾಟ ಸಮಿತಿ ಕರೆ ನೀಡಿದ್ದ ಮಸ್ಕಿ ಬಂದ್ ಸಂಪೂರ್ಣ ಯಶಸ್ವಿ ಯಾಯಿತು. ಶನಿವಾರ ಬೆಳಗ್ಗೆ ಯಿಂದ ವರ್ತಕರು ಸ್ವಯಂಪ್ರರೀತ ರಾಗಿ ಅಂಗಡಿ ಮುಗ್ಗಟ್ಟು, ಹೊಟೇಲ್, ಸಣ್ಣ ಪುಟ್ಟ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ಅನ್ನದಾತರ ಹೋರಾಟಕ್ಕೆ ಬೆಂಬಲ ನೀಡಿ ಗಮನ ಸೆಳೆದರು.
ಗಾಂಧಿ ನಗರ ಬಳಿಯ ಪ್ರವಾಸಿ ಮಂದಿರ ಬಳಿ ಜಮಾಯಿಸಿದ ನೂರಾರು ರೈತರು ೫ಎ ಕಾಲುವೆ ಅನುಷ್ಟಾನಕ್ಕೆ ಒತ್ತಾಯಿಸಿ ಬ್ರಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು ಅಶೋಕ ವೃತ್ತ, ಖಲೀಲ್ ವೃತ, ಮೇನ್ ಬಜಾರ್, ಕನಕ ವೃತ್ತ ಮೂಲಕ ಮೆರವಣಿಗೆ ಹಳೆ ಬಸ್ ನಿಲ್ದಾಣ ತಲುಪಿತು ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಿದ್ದ ರೈತರು ಯೋಜನೆ ಜಾರಿಗೆ ಒತ್ತಾಯಿಸಿ ಸರಕಾರದ ವಿರುದ್ದ ಘೋಷಣೆ ಮೊಳಗಿಸಿದರು.
ಹಳೆ ಬಸ್ ನಿಲ್ದಾಣ ಬಳಿಯ ಅಂಬೇಡ್ಕರ್ ಪ್ರತಿಮೆ ಸ್ಥಳ ಹತ್ತಿರ ಬಹಿರಂಗ ಸಭೆ ನಡೆಯಿತು ನಾನಾ ರೈತ, ಪ್ರಗತಿ ಪರ ಸಂಘಟನೆಗಳ ಮುಖಂಡರು ೫ಎ ನೀರಾವರಿ ಕಾಲುವೆ ಯೋಜನೆ ಜಾರಿಗೆ ಒತ್ತಾಯಿಸಿದರು ನಾನಾ ಬೇಡಿಕೆಗಳ ಮನವಿ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರಿಗೆ ಸಲ್ಲಿಸಿದರು.
ನಾನಾ ಪ್ರಗತಿ, ಕನ್ನಡ ಪರ ಸಂಘಟನೆ ಗಳ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದರು ರೈತರ ಹೋರಾಟಕ್ಕೆ ಸಾರ್ವಜನಿಕರು ಕೂಡ ಸಾಥ್ ನೀಡಿದರು. ಹೆದ್ದಾರಿಯಲ್ಲಿ ಮೆರವಣಿಗೆ ಸಾಗಿದ ಕಾರಣ ರಸ್ತೆ ಸಂಚಾರ ಅಸ್ತ ವ್ಯಸ್ತ ಗೊಂಡು ದಾರಿ ಉದ್ದಕ್ಕೂ ವಾಹನಗಳು ಸಾಲು ಗಟ್ಟಿ ನಿಂತವು ಪ್ರಯಾಣಿಕರು ರೈತರ ಹೋರಾಟ ಎಂದು ತಿಳಿದು ಕೆಲ ಹೊತ್ತು ವಾಹನಗಳಲ್ಲಿ ಸಮ್ಮನೆ ಕುಳಿತರು. ಮೆರವಣಿಗೆಯಲ್ಲಿ ನೂರಾರು ರೈತ ಮಹಿಳೆಯರು, ರೈತರ ಮಕ್ಕಳು ಕೂಡ ಪಾಲ್ಗೊಂಡಿದ್ದು ವಿಶೇಷ ಸಿಪಿಏ ದೀಪಕ್ ಭೂಸರೆಡ್ಡಿ, ಪಿಎಸ್‌ಏ ಸಣ್ಣ ವೀರೇಶ ಬಂದೋಬಸ್ತ್ ಕೈ ಗೊಂಡಿದ್ದರು.

(೯,ಜ.ಎಂಎಸ್ಕೆ ಪೋಟೋ೦೧)