
ಸಂಜೆವಾಣಿ ವಾರ್ತೆ
ಕುಕನೂರು, ಮಾ.02: ದೇಶದ ಜನತೆಗೆ ಅನ್ನ ನೀಡುವ ರೈತನ ಬದುಕು ನಿಜವಾಗಲೂ ಸ್ವಾಭಿಮಾನದ ಹೋರಾಟದ ಬದುಕಾಗಿದೆ. ತಮ್ಮ ಉಳಿವಿಗಾಗಿ ಇಂದಿನ ಕಾಲದಲ್ಲಿ ರೈತರೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಎಂದು ಪರಮಪೂಜ್ಯ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಹರ್ಲಾಪುರ ಹೇಳಿದರು.
ಅವರು ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ರೈತನಾಯಕ ಪ್ರೊಫೆಸರ್ ನಂಜುಂಡಿ ಸ್ವಾಮಿ ಸ್ಥಾಪಿತ ವಿ. ಆರ್.ನಾರಾಯಣ ರೆಡ್ಡಿ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ ) ಬೆಂಗಳೂರು, ಕೊಪ್ಪಳ ಜಿಲ್ಲಾ ಘಟಕ ಹಾಗೂ ಕುಕುನೂರು– ಯಲಬುರ್ಗಾ ತಾಲೂಕು ಘಟಕಗಳ ಸಹಯೋಗದೊಂದಿಗೆ ಬಿನ್ನಾಳ ಗ್ರಾಮ ಘಟಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ವೇದಮೂರ್ತಿ ಸಿದ್ದಲಿಂಗಯ್ಯ ಹಿರೇಮಠ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಬಿನ್ನಾಳ., ರೈತ ಮುಖಂಡ ಮಹೇಂದ್ರ ಕುಮಾರ್ ಗದಗ್, ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ಅಧ್ಯಕ್ಷ ಎಸ್. ಡಿ. ಕರಿಗೌಡ, ಕೊಪ್ಪಳ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವರಾಜ ಕೊಡ್ಲಿ. ಗದಗ್ ಜಿಲ್ಲಾಧ್ಯಕ್ಷ ಎಲ್ಲಪ್ಪ ಬಾಬ್ರಿ, ಕೊಪ್ಪಳ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ವೆಂಕರೆಡ್ಡಿ ಚಿಕ್ಕನಕಲ್ ಗೌರವ ಅಧ್ಯಕ್ಷ ಸೈಯದ್ ಸಾಬ್, ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಹಿರೇಮಠ, ಯಲಬುರ್ಗಾ ತಾಲೂಕ್ ರೈತ ಸಂಘದ ಅಧ್ಯಕ್ಷ ಮಂಜುನಾಥ್ ಚಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಜೀರ್ ಸಾಬ್ ತಳಕಲ್, ತಾಲೂಕು ಸದಸ್ಯ ಹುಚ್ಚೀರಪ್ಪ ಕೌದಿ, ಸಿದ್ದಪ್ಪ ಕೊಪ್ಪದ್, ರೇಣಮ್ಮ ಬಿನ್ನಾಳ, ಸಾವಿತ್ರಮ್ಮ ತಗ್ಗಿನಮನಿ, ಬಿನ್ನಾಳ ಗ್ರಾಮದ ಗುರು ಹಿರಿಯರು, ಮತ್ತು ಗ್ರಾಮ ಘಟಕದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನಾಮಫಲಕ ಅನಾವರಣ ಮಾಡಲಾಯಿತು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಪ್ರಾರ್ಥನ ಗೀತೆ, ನಾಡಗೀತೆ, ರೈತ ಗೀತೆ, ಮತ್ತು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ಮತ್ತು ಜಾನಪದ ಕಲಾವಿದ ಜೀವನ್ ಸಾಬ್ ಬಿನ್ನಾಳ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.